ಅಧಿಕ ತೂಕದ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ವಶ

31-AUG-GPT-3
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮಾರ್ಗವಾಗಿ ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರ್ ವಶಕ್ಕೆ ಪಡೆದಿರುವ ಪೊಲೀಸರು ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿರುವುದು.
Published on

ಗುಂಡ್ಲುಪೇಟೆ: ಅಧಿಕ ತೂಕದ ಕಲ್ಲು ತುಂಬಿಸಿಕೊಂಡು ಹೋಗುತ್ತಿದ್ದ ಟಿಪ್ಪರ್‌ಅನ್ನು ತಹಸೀಲ್ದಾರ್ ಅವರು ತಾಲೂಕಿನ ತೆರಕಣಾಂಬಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಶನಿವಾರ ಸಂಜೆ ಉಡೀಗಾಲ ಕಡೆಯಿಂದ ಪಟ್ಟಣದತ್ತ ಹೋಗುತ್ತಿದ್ದ ಟಿಪ್ಪರ್‌ನ ದಾಖಲೆಗಳನ್ನು ಪರಿಶೀಲಿಸಿದಾಗ ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್, ಅದನ್ನು ತೆರಕಣಾಂಬಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಸೋಮವಾರ ಗಣಿ ಇಲಾಖೆ ಅಧಿಕಾರಿಗಳು ವಿಧಿಸುವ ದಂಡ ಪಾವತಿಸಿದ ನಂತರ ಬಿಡುವಂತೆ ಸೂಚನೆ ನೀಡಿದ್ದಾರೆ.

ದಾಳಿ ಲೆಕ್ಕಿಸದ ಟಿಪ್ಪರ್‌ಗಳು

ಕಳೆದ 20 ದಿನಗಳಲ್ಲಿ ಪೊಲೀಸರು ಎರಡು ಬಾರಿ ದಾಳಿ ನಡೆಸಿ ಕೇರಳಕ್ಕೆ ಕಲ್ಲುಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳ ದಾಖಲೆಗಳನ್ನು ಪರಿಶೀಲಿಸಿ ಅಧಿಕ ತೂಕದ ಕಲ್ಲು ಸಾಗಣೆ ಮಾಡುತ್ತಿದ್ದ 25ಕ್ಕೂ ಹೆಚ್ಚಿನ ವಾಹನಗಳನ್ನು ಪತ್ತೆಹಚ್ಚಿದ್ದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದರು. ಅವುಗಳು ಸಾಗಿಸುತ್ತಿದ್ದ ಅಧಿಕ ತೂಕದ ಆಧಾರದ ಮೇಲೆ ತಲಾ 30 ರಿಂದ 80 ಸಾವಿರ ರೂ.ವರೆಗೂ ದಂಡ ವಿಧಿಸಿದ್ದರು. ಆದರೂ ಟಿಪ್ಪರ್‌ಗಳ ಚಾಲಕರು ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net