ಟಿಪ್ಪರ್-ಬೈಕ್ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು

LOKAPURA
ಲೋಕಾಪುರ-ಖಜ್ಜಿಡೋಣಿ ಮಾರ್ಗದಲ್ಲಿ ಟಿಪ್ಪರ್-ಬೈಕ್ ಮಧ್ಯೆ ಅಪಘಾತ ಸಂಭವಿಸಿರುವುದು.
Published on

ಬಾಗಲಕೋಟೆ : ಮುಧೋಳ ತಾಲೂಕಿನ ಲೋಕಾಪುರ-ಖಜ್ಜಿಡೋಣಿ ಮಾರ್ಗದ ಮಧ್ಯೆ ಟಿಪ್ಪರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ಬುಧವಾರ ನಡೆದಿದೆ.

ಶಾರದಾಳ ಗ್ರಾಮದ ನಿವಾಸಿ ಯಂಕಣ್ಣ ತಳವಾರ (29) ಹಾಗೂ ಉದಗಟ್ಟಿ ಗ್ರಾಮ ನಿವಾಸಿ ಯನಮಂತ ಪೂಜಾರ (28) ಮೃತಪಟ್ಟವರು. ಲೋಕಾಪುರ ಪಟ್ಟಣದಿಂದ ಬೈಕ್‌ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net