ನಿಂತಿದ್ದ ಟಿಪ್ಪರ್​ಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು

13-RNR-06 nagaraj masanagi
Published on

ರಾಣೆಬೆನ್ನೂರ: ರಸ್ತೆಯ ಮೇಲೆ ನಿಂತಿದ್ದ ಟಿಪ್ಪರ್​ಗೆ ಬೈಕ್​ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಟನೆ ನಗರದ ಎನ್​ವಿ ಹೋಟೆಲ್​ ಬಳಿ ಬುಧವಾರ ಸಂಭವಿಸಿದೆ.

ತಾಲೂಕಿನ ಜೋಯಿಸರಹರಳಹಳ್ಳಿ ನಾಗರಾಜ ಮುಕಪ್ಪ ಮಾಸಣಗಿ (28) ಮೃತ ಸವಾರ.

ಈತ ಬಸ್​ ನಿಲ್ದಾಣದಿಂದ ಕಮಲಾ ನಗರ ಹೋಗುತ್ತಿದ್ದ ಸಮಯದಲ್ಲಿ ಬೈಕ್​ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net