

ತಿಪಟೂರು : ಸರಿಯಾಗಿ ಊಟ, ತಿಂಡಿ ಕೊಡುತ್ತಿಲ್ಲವೆಂದು ಕೈದಿಗಳು ರಂಪಾಟ ನಡೆಸಿದ ನಂತರ ದುರಸ್ತಿಗೆಂದು ಮುಚ್ಚಿದ್ದ ಉಪವಿಭಾಗದ ಸಬ್‌ಜೈಲ್ ನಾಲ್ಕು ವರ್ಷಗಳು ಕಳೆದರೂ ಬಳಕೆಗೆ ಮುಕ್ತವಾಗಿಲ್ಲ.
2018ರ ೆ.14ರಂದು ರಾತ್ರಿ ವಾದಕ ವಸ್ತು ಸೇವಿಸಿ ಅಮಲಿನಲ್ಲಿದ್ದ ಕೈದಿಗಳ ಪೈಕಿ 7ಮಂದಿ ಸರಿಯಾಗಿ ಊಟ-ತಿಂಡಿ ಕೊಡುತ್ತಿಲ್ಲವೆಂಬ ಕಾರಣಕ್ಕೆ ಜೈಲಿನೊಳಗೆ ದಾಂಧಲೆ ವಾಡಿ, ಕಚೇರಿ ಕಡತಗಳನ್ನು ಸುಟ್ಟು ಹಾಕಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಎಸ್ಪಿ ಇಶಾಪಂತ್ ಮತ್ತು ಪ್ರಧಾನ ನ್ಯಾಯಾಧೀಶರು, ತೀವ್ರ ತರಹದ ಅಪರಾಧ ಹಿನ್ನೆಲೆಯುಳ್ಳ ಕೈದಿಗಳನ್ನು ಇಡುವ ಜೈಲಿನಲ್ಲಿ ಭದ್ರತಾ ಲೋಪ ಆಗಬಾರದೆಂದು ತೀರ್ಮಾನಿಸಿ, ಜೈಲಿನಲ್ಲಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲು ಶಿಫಾರಸು ವಾಡಿದ ಹಿನ್ನೆಲೆಯಲ್ಲಿ ಟನೆ ನಡೆದ ಮರು ದಿನದಿಂದ ಜೈಲನ್ನು ಮುಚ್ಚಲಾಗಿತ್ತು.
ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಜೈಲಿನ ನವೀಕರಣ ಕೈಗೊಂಡು, 2020ರ ಜೂ.13ರಂದು ಜೈಲು ಬಳಕೆಗೆ ಮುಕ್ತ ಎಂಬ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ತೆಗೆ ಉಪ ವಿಭಾಗದ ಬಂದೀಖಾನೆಗೆ ಅಗತ್ಯವಿರುವ ಸಿಬ್ಬಂದಿ ನಿಯೋಜಿಸಲಾಗಿದ್ದು, ಕೈದಿಗಳು ತಪ್ಪಿಸಿಕೊಳ್ಳಬಾರದೆಂದು ಸುರಕ್ಷತಾ ದೃಷ್ಟಿಯಿಂದ ಜೈಲ್ ಕಾಂಪೌಂಡ್‌ಗೆ ರೇಜರ್ ಬ್ಲೇಡ್ ೆನ್ಸಿಂಗ್ ಅಳವಡಿಸಲಾಗಿದೆ.
ಸಿಸಿಟಿವಿ ಅಳವಡಿಕೆ ಮತ್ತು ಶುದ್ಧ ನೀರಿನ ಟಕ ಅಳವಡಿಕೆಯಷ್ಟೇ ಬಾಕಿ ಇದೆ ಎನ್ನಲಾಗಿದ್ದು, ಕೈದಿಗಳಿಗೆ ಊಟ, ತಿಂಡಿ ಪೂರೈಸಲು ಅಡುಗೆ ಮನೆ ಸಿದ್ಧವಾಗಿದ್ದರೂ ಆಹಾರ ಸರಬರಾಜು ಗುತ್ತಿಗೆ ಪರವಾನಗಿ ನೀಡುವುದಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಆಗದಿರುವುದು ಸಬ್ ಜೈಲಿನ ಮರು ಆರಂಭಕ್ಕೆ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಬ್ ಜೈಲನ್ನು ಬಳಕೆಗೆ ಮುಕ್ತ ವಾಡಬೇಕಿದೆ.
ಇಷ್ಟೆಲ್ಲಾ ಆಗಿದ್ದರೂ ಪೊಲೀಸರಿಗೆ ಕೈದಿಗಳನ್ನು ತುಮಕೂರು ಜಿಲ್ಲಾ ಬಂದೀಖಾನೆಗೆ ಕರೆದೊಯ್ಯುವ ಸಂಕಷ್ಟ ಇನ್ನೂ ತಪ್ಪಿಲ್ಲ. ನ್ಯಾಯಾಲಯದ ಆದೇಶದಂತೆ ಕೈದಿಗಳನ್ನು ಜಿಲ್ಲಾ ಬಂದೀಖಾನೆಗೆ ಕರೆದೊಯ್ಯುವುದು ಮತ್ತು ಮತ್ತೆ ಕರೆದುಕೊಂಡು ಬರುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಇಲಾಖೆ ಅಥವಾ ಬಾಡಿಗೆ ವಾಹನದಲ್ಲಿ ಕೈದಿಗಳನ್ನು ಕರೆದೊಯ್ದರೆ ಹೆಚ್ಚುವರಿ ಆರ್ಥಿಕ ಹೊರೆಯೂ ಸರ್ಕಾರಕ್ಕೆ ಬೀಳುತ್ತದೆ.
ಹೊಸ ಜೈಲ್ ನಿರ್ಮಾಣಕ್ಕೆ ಜಾಗ : ಹಾಲಿ ಇರುವ ಸಬ್ ಜೈಲಿನಲ್ಲಿ 25 ಕೈದಿಗಳನ್ನು ಇರಿಸಲು ಅವಕಾಶವಿದ್ದು, ತಿಪಟೂರು ನಗರ ಸೇರಿ ಒಟ್ಟು 10 ಠಾಣೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೊಡ್ಡ ಪ್ರವಾಣದ ಜೈಲು ನಿರ್ಮಿಸಲು ಸರ್ಕಾರ ನಗರ ಸಮೀಪದ ಲಿಂಗದಹಳ್ಳಿ ಬಳಿ 4 ಎಕರೆ ಜಮೀನು ನೀಡಿದೆ. ಇದನ್ನು ಸದುಪಯೋಗಪಡಿಸಿಕೊಂಡರೆ ಉಪವಿಭಾಗ ವ್ಯಾಪ್ತಿಯ ಠಾಣೆೆ ಸಿಬ್ಬಂದಿಗೆ ಹೊರೆ ಕಡಿಮೆಯಾಗುವ ಜಗೆ ಆರ್ಥಿಕ ದೃಷ್ಟಿಯಿಂದ ಸರ್ಕಾರಕ್ಕೂ ಒಳಿತು.
ಹಲವಾರು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ಜೈಲಿನ ಮರು ಆರಂಭಕ್ಕೆ ಮನವಿ ವಾಡಿದ್ದೇನೆ. ಎಸ್ಪಿ ಕೂಡ ಈ ನಿಟ್ಟಿನಲ್ಲಿ ಸತತ ಪ್ರಯತ್ನ ಮುಂದುವರಿಸಿದ್ದಾರೆ. ಆಹಾರ ಸರಬರಾಜು ಗುತ್ತಿಗೆ ವಿಷಯದ ಹಿನ್ನಡೆಗೆ ಕಾರಣವೇನು ಎಂಬುದರ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಎನ್.ಚಂದನ್ ಕುವಾರ್, ಡಿವೈಎಸ್‌ಪಿ ತಿಪಟೂರು