ಸಕಾಲಕ್ಕೆ ಬಿತ್ತನೆ ಬೀಜ ಪಡೆಯಲಿ

26Muragod1
Published on

ಮುರಗೋಡ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ರೈತರ ಬೇಡಿಕೆಗೆ ಅನುಗುಣವಾಗಿ ಸಕಾಲಕ್ಕೆ ಅಗತ್ಯ ಬಿತ್ತನೆ ಬೀಜ ಪೂರೈಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮುರಗೋಡ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಸರ್ಕಾರದ ಸಬ್ಸಿಡಿ ಬಿತ್ತನೆ ಬೀಜ ವಿತರಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಕೃಷಿ ಚಟುವಟಿಕೆ ಕೈಗೊಂಡು ಬಿತ್ತನೆಗೆ ಭೂಮಿ ಸಿದ್ಧಗೊಳಿಸಿರುವ ರೈತರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಜತೆಗೆ ಕೃಷಿ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಆಧುನಿಕ ತಂತ್ರಜ್ಞ್ಞಾನದಿಂದ ಉತ್ತಮ ಬೆಳೆ ತೆಗೆಯಬೇಕು ಎಂದು ಸಲಹೆ ನೀಡಿದರು.

ಕೃಷಿ ಉಪ ನಿರ್ದೇಶಕ ಸಲಿಂ ಸಂಗತ್ರಾಸ, ಎಡಿಎ ಶಿವಪ್ರಕಾಶ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿಗೆ ಪೂರಕವಾಗಿ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಿಗಳ ಅಗತ್ಯ ದಾಸ್ತಾನು ಇದೆ. ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆಯುವ ಜತೆಗೆ ರಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೃಷಿಕ ಸಮಾಜದ ತಾಲೂಕಾಧ್ಯ ಉಮೇಶ ಬೊಳೆತ್ತಿನ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೂಳಿ, ಉಪತಹಸೀಲ್ದಾರ್​ ಡಿ.ಬಿ.ಅಲ್ಲಯ್ಯನವಮಠ, ಎಪಿಎಂಸಿ ಸದಸ್ಯ ರಾಜು ಕುಲಾಲ, ರಾಮಚಂದ್ರ ಶೆಟ್ಟರ, ಕೃಷಿ ಅಧಿಕಾರಿ ಎಂ.ಎಂ. ಅಮಠೆ, ರೈತ ಮುಖಂಡ ಸುರೇಶ ರುದ್ರಪ್ಪನವರ, ರವಿ ಕುರಬೇಟ, ಶ್ವೇತಾ ತೋಟಗಿ, ಮಂಜು ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net