ಎಸ್‌ಎಸ್‌ಎಲ್‌ಸಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಸಕಾಲ ಸಿದ್ದತೆ ಜಿಲ್ಲೆಯಲ್ಲಿ ೩೩,೯೦೬ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ೯೭ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

sslc exam
sslc exam
Published on

ರಾಯಚೂರು ಜಿಲ್ಲಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈಗಾಗಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು,ಮಾ.೨೧ ರಿಂದ ಏ.೦೨ ರವರೆಗೆ ಪರೀಕ್ಷೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸುಮಾರು ೯೭ ಪರೀಕ್ಷೆ ಕೇಂದ್ರದಲ್ಲಿ ೩೩,೯೦೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆಗಳನ್ನು ಕಟ್ಟುನಿಟ್ಟಗಿ ವೆಬ್ ಕಾಸ್ಟಿಂಗ್ ಮೂಲಕ ನಡೆಸಲು ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ತಲುಪಿಸುವ ಕೆಲಸ ಮುಗಿದಿದ್ದು. ಮಾ.೨೧ ರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪೂರ್ವ ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಎಷ್ಟು ಪರೀಕ್ಷೆ ಕೇಂದ್ರಗಳು

ಜಿಲ್ಲಾದ್ಯಂತ ಸುಮಾರು ೯೭ ಪರೀಕ್ಷೆ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ೯೩ ಸಾಮಾನ್ಯ ಪರೀಕ್ಷೆ ಕೇಂದ್ರಗಳು,೦೪ ಸೂಕ್ಷ÷್ಮ ಕೇಂದ್ರಗಳೆAದು ಗುರುತಿಸಲಾಗಿದ್ದು, ಈ ಪೈಕಿ ದೇವದುರ್ಗ ತಾಲೂಕಿನಲ್ಲಿ ೧೫ ಕೇಂದ್ರಗಳು, ಲಿಂಗಸುಗೂರು ತಾಲೂಕಿನಲ್ಲಿ ೧೮ ಕೇಂದ್ರಗಳು, ಮಾನ್ವಿ ತಾಲೂಕಿನ ೧೮ ಕೇಂದ್ರಗಳಲ್ಲಿ, ರಾಯಚೂರು ತಾಲೂಕಿನ ೨೭ ಕೇಂದ್ರಗಳು, ಸಿಂಧನೂರಿನ ೧೯ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಒಂದು ಕೊಠಡಿಯಲ್ಲಿ ೨೪ ವಿದ್ಯಾಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ ಸಹ ಮಾಡಲಾಗಿದೆ.

ಎಷÀÄ್ಟ ವಿದ್ಯಾರ್ಥಿಗಳ ನೊಂದಣಿ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ೩೩,೯೦೬ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ೩೦,೯೯೨ ವಿದ್ಯಾರ್ಥಿಗಳು ರೆಗ್ಯೂಲರ್ -É್ರಶರ್‌ಗಳಿದ್ದು, ೭೬೧ ವಿದ್ಯಾರ್ಥಿಗಳು, ಪ್ರೆÊವೇಟ್ -É್ರಶರ್‌ಗಳಿದ್ದಾರೆ. ಉಳಿದಂತೆ ೨೦೧೦ ರೆಗ್ಯೂಲರ್ ರಿಪೀಟರ್‌ಗಳಿದ್ದು, ೧೪೩ ಪ್ರೆÊವೇಟ್ ರಿಪೀಟರ್ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊAಡಿದ್ದಾರೆ. ಇದರಲ್ಲಿ ದೇವದುರ್ಗ ತಾಲೂಕಿನಲ್ಲಿ ೪,೬೬೦, ಲಿಂಗಸುಗೂರು ತಾಲೂಕಿನಲ್ಲಿ ೬,೭೪೬, ಮಾನ್ವಿ ತಾಲೂಕಿನ ೬,೩೩೧, ರಾಯಚೂರು ತಾಲೂಕಿನಲ್ಲಿ ೯,೯೧೨ ಹಾಗೂ ಸಿಂಧನೂರು ತಾಲೂಕಿನಲ್ಲಿ ೬,೨೫೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಕಲು ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ವೆಬ್‌ಕಾಸ್ಟಿಂಗ್ ನಡೆಸಿ ಪರೀಕ್ಷೆಯ ಮೇಲೆ ನಿಗಾ ಇಡಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹಾಗೂ ಪ್ರತಿ ತಾಲೂಕಿನಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೆಬ್ ಕಾಸ್ಟಿಂಗ್ ಕಾರ್ಯವನ್ನು ಶಿಕ್ಷಣ ಇಲಾಖೆಯಿಂದ ನಿಯೋಜಿಸಲಾದ ಒಂದು ತಂಡ ವೀಕ್ಷಣೆ ಮಾಡುತ್ತದೆ. ಈ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ೧೪೧೫ ಕೊಠಡಿಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗಿದೆ.

ಅಽಕಾರಿಗಳ ತಂಡ ರಚನೆ

ಪರೀಕ್ಷೆಯಲ್ಲಿ ಅಕ್ರಮಗಳು ಜರುಗದಂತೆ ಮತ್ತು ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಾರ್ಯವೂ ಕೂಡ ಇರಲಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಗೆ ನಿಯೋಜಿಸಿರುವ ಅಽಕಾರಿಗಳು ಹಾಗೂ ಸಿಬ್ಬಂದಿ ಹೊರತುಪಡಿಸಿ ಯಾರೂ ಕೂಡ ಓಡಾಡದಂತೆ ನಿಷೇದಾe್ಞÉ ಜಾರಿಗೊಳಿಸಲಾಗುತ್ತದೆ. ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನಿರ್ವಹಣೆಯನ್ನು ಹೆಚ್ಚುವರಿ ಜಿಲ್ಲಾಽಕಾರಿಗಳ ನೇತÊತ್ವದಲ್ಲಿ, ಜಿಲ್ಲಾ ಖಜಾನೆ ಮತ್ತು ಡಿಡಿಪಿಯು ಒಳಗೊಂಡAತೆ ಅಽಕಾರಿಗಳ ತಂಡ ರಚಿಸಲಾಗಿದೆ. ೪೦ಮೀ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಪ್ರದೇಶವನ್ನು ನಿಷೆÉÃಽತ ಪ್ರದೇಶವೆಂದು ತಿಳಿಸಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್‌ಗಳನ್ನು ಮುಚ್ಚಿಸುವ ಆದೇಶವನ್ನು ಹೊರಡಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ವಿಡಿಯೋ ಕಾನ್ಸರೆನ್ಸ್ನಲ್ಲಿ ನೀಡಿದ ಸೂಚನೆಯಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಒಬ್ಬ ಅಽಕಾರಿಯನ್ನು ವೀಕ್ಷಕರೆಂದು ನೇಮಿಸಲಾಗಿದೆ.

ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯ

ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಲು ಸೂಚನೆ ನೀಡಲಾಗಿದೆ. ಮೊಬೈಲ್ ಬಳಕೆ ನಿಷೆÉÃಽಸಲಾಗಿದೆ. ಆದರೆ, ಪರೀಕ್ಷಾ ಕೇಂದ್ರದ ಮುಖ್ಯ ಅಽÃಕ್ಷಕರು ಮಾತ್ರವೇ ಬೇಸಿಕ್ ಮೊಬೈಲ್ ಸೆಟ್‌ನ್ನು ಮಾತ್ರ ಉಪಯೋಗಿಸಲು ಅನುಮತಿಸಲಾಗಿದೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಾಲ ಸಿದ್ದತೆ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೩೩,೯೦೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಪರೀಕ್ಷೆಯಲ್ಲಿ ಆಕ್ರಮ ನಡೆಯದಂತೆ ಜಿಲ್ಲೆಯ ೯೭ ಪರೀಕ್ಷೆ ಕೇಂದ್ರದಲ್ಲಿ ವೆಬ್ ಕಾಸ್ಟೀಂಗ್ ಮಾಡಲಾಗಿದೆ.

ಡಾ.ಕೆ.ಡಿ.ಬಡಿಗೇರ್ ಡಿಡಿಪಿಐ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net