ಸಭೆ ಸಮಯತಿಂದ ಜಾತ್ರೆ ಲೆಕ್ಕ !

APEAL GIVEN TO YALLAPURA TMC
Published on

ಯಲ್ಲಾಪುರ: ಹಿಂದಿನ ಗ್ರಾಮದೇವಿ ಜಾತ್ರೆಯ ಲೆಕ್ಕಚಾರದ ಕುರಿತಾಗಿ ನಡೆದ ಸಭೆಯ ಠರಾವು ಇನ್ನೂ ನೀಡಿಲ್ಲ. ಜಾತ್ರೆಯ ಅಂಗಡಿ ಹರಾಜಿನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಪ.ಪಂ. ಸದಸ್ಯರಾದ ರಾಧಾಕೃಷ್ಣ ನಾಯ್ಕ,ಸತೀಶ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಬುಧವಾರ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಕೇವಲ ಒಂದು ವಿಷಯಕ್ಕೆ ಮಾತ್ರ ವಿಶೆಷ ಸಾಮಾನ್ಯ ಸಭೆ ಕರೆದು ಸದಸ್ಯರ ಸಮಯ ಹಾಳು ಮಾಡಲಾಗುತ್ತಿದೆ ಎಂದು ದೂರಿದ ಅವರು, ಸಾಮಾನ್ಯ ಸಭೆ ಕರೆಯಲು ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಮೀನು ಮಾರುಕಟ್ಟೆ ಟೆಂಡರ್ ಯಾಕೆ ಮುಂದೆ ಹಾಕಿದ್ದೀರಿ ಎಂದು ಸದಸ್ಯ ಸೋಮೇಶ್ವರ ನಾಯ್ಕ ಪ್ರಶ್ನಿಸಿದರು. ಮೀನು ಮಾರುಕಟ್ಟೆಯ ಬಾಡಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಸದಸ್ಯ ನಾಗರಾಜ ಅಂಕೋಲೆಕರ್ ಧ್ವನಿ ಎತ್ತಿದರು.

ಸಭೆಯಲ್ಲಿ ಮೂಲ ವಿಷಯ ಬಿಟ್ಟು, ಕಳೆದ ಜಾತ್ರೆಯ ಖರ್ಚು ವೆಚ್ಚ, ಮೀನು ಮಾರುಕಟ್ಟೆಯ ಟೆಂಡರ್ ವಿಷಯದ ಚರ್ಚೆ ಬಹುಪಾಲು ಸಮಯವನ್ನು ನುಂಗಿ ಹಾಕಿತು. ಸದ್ಯದಲ್ಲೇ ಸಾಮಾನ್ಯ ಸಭೆ ಕರೆಯಲಾಗುತ್ತದೆ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಸಮಜಾಯಿಷಿ ನೀಡಿದರು. ಸರ್ಕಾರದ ವಿವಿಧ ಯೋಜನೆಯಡಿ ಹಂಚಿಕೆಯಾದ ಅನುದಾನಕ್ಕೆ ಕ್ರೀಯಾಯೋಜನೆ ತಯಾರಿಸುವ ಕುರಿತು ಚರ್ಚೆ ನಡೆಯಿತು.

ರಾಷ್ಟ್ರಮಟ್ಟದ ಕ್ರೀಡಾಪಟು ದಿ.ದಯಾ ಕಾರಂತ ಅವರ ಹೆಸರನ್ನು ಪೊಲೀಸ್ ಠಾಣೆಯ ಸರ್ಕಲ್ ಗೆ ಇರಿಸುವಂತೆ ಆಗ್ರಹಿಸಿ ಪ.ಪಂ ಸದಸ್ಯರೆಲ್ಲ ಸೇರಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಉಪಾಧ್ಯಕ್ಷ ಅಮಿತ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net