

ವಿಜಯಪುರ: ವಿದ್ಯಾರ್ಥಿ ದೆಸೆಯಲ್ಲಿ ಸಮಯ ಪ್ರಜ್ಞೆಯಿಂದ ಇತರ ವಿಷಯಗಳ ಕಡೆಗೆ ಹೆಚ್ಚಿನ ಗಮನ ನೀಡದೆ ಅಭ್ಯಾಸದ ಕಡೆಗೆ ಗಮನನೀಡಿ, ಉತ್ತಮ ಅಂಕಗಳನ್ನು ಪಡೆದು ಉತ್ತಮ ಶಿಕ್ಷಕರಾಗಿ ಜೀವನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯಿರಿ ಎಂದು ಬಂಜಾರ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಿ.ಎಲ್. ಚವಾಣ್ ಹೇಳಿದರು.
ವಿಜಯಪುರ ಜಿಲ್ಲಾ ಬಂಜಾರ ವಿದ್ಯಾವರ್ಧಕ ಸಂಘದ ಬಂಜಾರ ಬಿ.ಇಡಿ., ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಪ್ರಥಮ ವರ್ಷದ ಬಿ.ಇಡಿ., ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಮುಂದೆ ರಾಷ್ಟ್ರದ ಅಭಿವೃದ್ಧಿಗೆ ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿರಿ ಎಂದು ಶುಭ ಹಾರೈಸಿದರು.
ಬಂಜಾರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಬಿ. ಪವಾರ ಪ್ರಶಿಕ್ಷಣಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಬಿ.ಇಡಿ., ಕಾಲೇಜಿನ ಪ್ರಾಚಾರ್ಯೆ ಜಯಶ್ರೀ ಪಾಟೀಲ ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ಭೌತಿಕ ಸೌಲಭ್ಯ ಹಾಗೂ ಶಿಕ್ಷಣ ಸಂಪನ್ಮೂಲಗಳನ್ನು ಸಮರ್ಪಕವಾಗಿ ಪಡೆದುಕೊಂಡು ಸಮಾಜದಲ್ಲಿ ಮುಂದೆ ಆದರ್ಶ ಶಿಕ್ಷಕರಾಗಿ ಹೊರಹೊಮ್ಮಿ ಎಂದರು.
ಕಾರ್ಯಾಧ್ಯಕ್ಷ ಕೆ.ಜಿ. ರಾಠೋಡ, ಯುವ ಕಾರ್ಯದರ್ಶಿ ಆರ್.ಡಿ. ಚವಾಣ, ಆಡಳಿತ ಅಧಿಕಾರಿ ಎಸ್.ಬಿ. ಬುರ್ಲಿ, ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಎ.ಪಿ. ಬಿರಾದಾರ, ವಿ.ವಿ. ಪಾಟೀಲ್, ಪಿ.ಎಂ. ಕೋಳಿ, ಇ.ಡಿ. ಲವಾಣಿ. ಎಂ.ಎಲ್. ಚವಾಣ್, ಸಂದೀಪ್ ರಾಠೋಡ್ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.
ಉಪಪ್ರಚಾರ್ಯ ಟಿ.ಬಿ. ಪವಾರ, ಪ್ರೊ. ಎಸ್.ಎಸ್. ನಾಯಕ, ಜಯಶ್ರೀ ಬಿರಾದಾರ, ಅನೀಶ್ ಜಮಖಂಡಿ, ಬಿ.ಎಲ್. ಚವಾಣ, ಪ್ರಥಮ, ದ್ವಿತೀಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸೌಮ್ಯ ಹಿಟ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಸ್.ಎಂ. ಕುಂಬಾರ ಸ್ವಾಗತಿಸಿದರು. ಕವಿತಾ ಪವಾರ ನಿರೂಪಿಸಿದರು. ಪ್ರೊ. ಎನ್.ಸಿ. ಮಾಳಗಿ ವಂದಿಸಿದರು.