

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗ 314ಕ್ಕೂ ಹೆಚ್ಚು ರೈಲುಗಳ ಸಮಯವನ್ನು ಪರಿಷ್ಕರಿಸಿದ್ದು, ಅ. 1ರಿಂದಲೇ ಜಾರಿಗೆ ಬಂದಿದೆ.
ಮೈಸೂರು ನಿಲ್ದಾಣದಿಂದ 9 ರೈಲುಗಳ ನಿರ್ಗಮನ ಸಮಯವೂ ಈ ಪರಿಷ್ಕರಣೆಯಲ್ಲಿ ಸೇರಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ರೈಲಿನ ವೇಳಾಪಟ್ಟಿ ಬದಲಾವಣೆಯನ್ನು ಗಮನಿಸಿಕೊಳ್ಳಬೇಕು ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜೆ.ಲೋಹಿತೇಶ್ವರ ತಿಳಿಸಿದ್ದಾರೆ.
ಪರಿಷ್ಕೃತ ರೈಲು ವೇಳಾಪಟ್ಟಿಯನ್ನು ಪರಿಶೀಲಿಸಲು ಪ್ರಯಾಣಿಕರು ((https://swr.indianrailways.gov.in/view_section.jsp?lang=0&id=0,1,808,818,847,1880 ) ಲಿಂಕ್‌ಗೆ ಭೇಟಿ ನೀಡಬಹುದು.
ಮಾಹಿತಿಗಾಗಿ ದೂ.ಸಂ. 139ಕ್ಕೆ ಕರೆ ಮಾಡಬಹುದು.
ರೈಲುಗಳ ಮಾರ್ಗದಲ್ಲಿನ ಮಧ್ಯಂತರ ನಿಲ್ದಾಣಗಳಲ್ಲೂ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಗಳನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 17301 ಹಿಂದಿನ ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರಾತ್ರಿ 20.45 ಗಂಟೆಗೆ ಮೈಸೂರಿನಿಂದ ನಿರ್ಗಮಿಸಲಿದೆ. ಜತೆಗೆ, ಈ ರೈಲು ಸೇವೆಯನ್ನು ಬೆಳಗಾವಿವರೆಗೂ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.