

ಕಾಸರಗೋಡು: ಬೋವಿಕ್ಕಾನ ಸನಿಹದ ಮಲ್ಲ ನಿವಾಸಿ ವಿಕ್ಟರ್ ಡಿಸೋಜ ಅವರ ಪುತ್ರ ಪ್ರವೀಣ್ ಪ್ರಕಾಶ್ ಡಿಸೋಜ(28) ನಾಪತ್ತೆ ಬಗ್ಗೆ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಟೈಲ್ಸ್ ಕಾರ್ಮಿಕನಾಗಿದ್ದ ಪ್ರವೀಣ್ ಪ್ರಕಾಶ್ ಡಿಸೋಜ, ಏಪ್ರಿಲ್ 18ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು ವಾಪಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲಸಕ್ಕೆಂದು ದೂರದ ಊರಿಗೆ ತೆರಳಿದಲ್ಲಿ ಕೆಲವು ದಿನಗಳ ನಂತರ ಮನೆಗೆ ವಾಪಸಾಗುತ್ತಿದ್ದರು. ಈ ಬಾರಿ ಎರಡೂವರೆ ತಿಂಗಳು ಕಳೆದರೂ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.