ತಿಕೋಟಾ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ

tikota sarvagina abhirudhi krama
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿ ನಂತರ ವಿದ್ಯಾರ್ಥಿಗಳಿಗೆ ನೋಟ್​ಬುಕ್​ ವಿತರಿಸಿದರು. ರಾಮಗೊಂಡ ಚಾವರ, ಸಿದ್ದು ಬೆಳಗಾವಿ, ವಿಜಯಕುಮಾರ ಹಿರೇಮಠ ಮತ್ತಿತರರಿದ್ದರು.
Published on

ವಿಜಯಪುರ: ಬಬಲೇಶ್ವರ ಮತೇತ್ರದಲ್ಲಿ ನೀರಾವರಿ ಜೊತೆಗೆ ಮೂಲ ಸೌಕರ್ಯ, ಗುಣಮಟ್ಟದ ಶಿಣ, ವಿದ್ಯುತ್​ ಪೂರೈಕೆ ಮತ್ತು ಕೈಗಾರಿಕೆ ಉತ್ತೇಜನಕ್ಕೆ ಒತ್ತು ನೀಡಲಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಶನಿವಾರ ಕೆಆರ್​ಐಡಿಎಲ್​ ವತಿಯಿಂದ 25 ಲ ರೂ. ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಂತರ ತಿಕೋಟಾ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಬಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆಆರ್​ಐಡಿಎಲ್​ ವತಿಯಿಂದ ತಲಾ 50 ಲ ರೂ. ಗಳ ವೆಚ್ಚದಲ್ಲಿ ಪಟ್ಟಣದ ಅಲ್ಪಸಂಖ್ಯಾತರ ಕಾಲನಿ ಮತ್ತು ಗೈರಾಣ ಕಾಲನಿಯ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಪಪಂ ವತಿಯಿಂದ 112.23 ಲ ರೂ. ಗಳ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ತಿಕೋಟಾ ಪಟ್ಟಣದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ವಾರ್ಡ್​ವಾರು ಬೇಡಿಕೆಗಳನ್ನು ಕ್ರೂಢಿಕರಿಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ವರದಿ ನೀಡಬೇಕು ಎಂದು ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯ ಮಾದರಿಯಲ್ಲಿ ಶಿಣ, ಕೈಗಾರಿಕೆ, ವಿದ್ಯುತ್​ ಹಾಗೂ ಮೂಲ ಸೌಕರ್ಯ ೇತ್ರಗಳಲ್ಲಿ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಹೊನವಾಡ ಗ್ರಾಮದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಬಬಲೇಶ್ವರ ಮತೇತ್ರದಲ್ಲಿ ಸಚಿವ ಎಂ.ಬಿ. ಪಾಟೀಲರು ಹಲವು ಕೈಗಾರಿಕೋದ್ಯಮಿಗಳಿಂದ ಸಿಎಸ್​ಆರ್​ ಅನುದಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಕಾನ್ವೆಂಟ್​ ಮಾದರಿಯಲ್ಲಿ ಶಿಣ ಒದಗಿಸುತ್ತಿದ್ದಾರೆ ಎಂದು ಹೇಳಿದರು.

ಎರಡೂ ಕಡೇ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್​ಬುಕ್​ಗಳನ್ನು ವಿತರಿಸಲಾಯಿತು. ಪಪಂ ಅಧಿಕಾರಿ ರಾವೇಂದ್ರ ನಡುವಿನಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ, ಮುಖಂಡರಾದ ರಾಮಗೊಂಡ ಚಾವರ, ಸಿದ್ದು ಬೆಳಗಾವಿ, ವಿಜಯಕುಮಾರ ಹಿರೇಮಠ, ಅಕ್ಬರ ತಿಕೋಟಿ, ಸಾಬು ಖಂಡೇಕಾರ, ದುಂಡಪ್ಪ ವಾಲಿಕಾರ, ಶ್ರೀಕಾಂತ ಕುಂಬಾರ, ವಿಜುಗೌಡ ಪಾಟೀಲ, ಆರ್​.ಬಿ. ದೇಸಾಯಿ, ಭೀಮು ಹಂಗರಗಿ, ಸಂತೋಷ ಕೋಲಾರ, ಮಲ್ಲಿಕಾರ್ಜುನ ಹಂಜಗಿ, ಬಸಯ್ಯಾ ವಿಭೂತಿಮಠ, ಭಾಗೀರಥಿ ತೇಲಿ, ಮಮ್ಮು ಮುಜಾವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net