ತಿಕೋಟಾದಲ್ಲಿ ಬಿಗಿ ಭದ್ರತೆ

Tikota-29-1a
Published on

ತಿಕೋಟಾ: ಪಟ್ಟಣದಲ್ಲಿ ಗುರುವಾರದ ಸಂತೆ ನಿಷೇಧಿಸಲಾಗಿತ್ತಲ್ಲದೆ, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಜನಸಂಚಾರ ಸ್ಥಗಿತಗೊಳಿಸಲಾಗಿತ್ತು.

ಸಂತೆಗೆಂದು ಬೆಳಗ್ಗೆ ಆಗಮಿಸಿದ್ದ ವಿವಿಧ ಗ್ರಾಮಗಳ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪೊಲೀಸರು ತಿಳಿಹೇಳಿ ಮರಳಿ ಕಳುಹಿಸಿದರು.

ಅಲ್ಲದೆ, ಡಾ. ಅಂಬೇಡ್ಕರ್ ವೃತ್ತ, ಹಾಜಿಮಸ್ತಾನ್ ಕಮಾನ್, ಜತ್ ರಸ್ತೆ ಸೇರಿ ವಿವಿಧ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.

ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸ್ ಹಾಗೂ ಪಪಂ ಅಧಿಕಾರಿಗಳು ಬೀಡು ಬಿಟ್ಟಿದ್ದರು. ಮಹಾರಾಷ್ಟ್ರ ಗಡಿಭಾಗದ ಕನಮಡಿ ಮತ್ತು ಅಳಗಿನಾಳ ಗುಡ್ಡಾಪುರ ಕ್ರಾಸ್ ಮತ್ತು ಬೆಳಗಾವಿ ಜಿಲ್ಲಾ ತೇಲಸಂಗದಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿತ್ತು. ಪಿಎಸ್‌ಐ ಬಸವರಾಜ ಬಿಸನಕೋಪ್ಪ, ಪಪಂ ಅಧಿಕಾರಿ ರುದ್ರಗೌಡ ಸೊಲ್ಲಾಪುರ, ಪೊಲೀಸ್ ಸಿಬ್ಬಂದಿ ಹಾಗೂ ಪಪಂ ಸಿಬ್ಬಂದಿ ಹಾಗೂ ಆಶಾ ಕಾರ್ಯಕತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net