ಪಂಚಪೀಠಗಳ ಕೊಡುಗೆ ಅಪಾರ

Tikota-16-1
Published on

ತಿಕೋಟಾ: ಜಂಗಮ ಕುಲಕ್ಕೆ ಕಾಯಕ ನೀಡಿದ ಮೂಲ ಪುರುಷ ರೇಣುಕಾಚಾರ್ಯರು ಎಂದು ಪುಣೆಯ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸದಸ್ಯ ಸಂಜಯ ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಭೂ ನ್ಯಾಯ ಮಂಡಳಿ ಸದಸ್ಯ ರಾಜೇಂದ್ರ ಕುಲಕರ್ಣಿ ಮಾತನಾಡಿ, ಎಲ್ಲ ಸಮಾಜದ ನೆರವು ಪಡೆದು ಸದೃಢವಾಗಿ ಬೆಳೆಯಬೇಕು. ನಮ್ಮ ದೇಶದ ಮಾನವ ಜನಾಂಗಕ್ಕೆ ಪಂಚಪೀಠಗಳ ಕೊಡುಗೆ ಅಪಾರವಾಗಿದೆ ಎಂದರು.

ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಶಿವಶಂಕ್ರಯ್ಯ ಹಿರೇಮಠ, ಬಸಯ್ಯ ವಿಭೂತಿ ಮಾತನಾಡಿದರು. ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಉಮೇಶ ಕೋಳಕೂರ, ವಿಜುಗೌಡ ಪಾಟೀಲ, ಜಗದೀಶಗೌಡ ಪಾಟೀಲ, ಸಾಬು ಮಾಶ್ಯಾಳ, ಗಿರಮಲ್ಲಯ್ಯ ಮಠಪತಿ, ಶಾಂತಲಿಂಗಯ್ಯ ಸಾಲಿಮಠ, ಚಂದ್ರಶೇಖರಯ್ಯ ಹಿರೇಮಠ, ದಯಾನಂದ ಪಾಟೀಲ, ಶಿವಾನಂದ ಪಾಟೀಲ, ಚನ್ನಯ್ಯ ಸಾಲಿಮಠ, ಗಿರೀಶ ಕುಲಕರ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net