ಕೊಲೆ ಪ್ರಕರಣದ ಮೂವರ ಆರೋಪಿಗಳ ಬಂಧನ

Tikota-3-2
Published on

ತಿಕೋಟಾ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನಾಪುರ ಕ್ರಾಸ್ ಬಳಿ ಡಿ.31ರಂದು ಮಹಾದೇವ ಕೌಲಗಿ ಅವರನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ಕೊಲೆಯಾದ ಕುರಿತು ವಿಜಯಪುರದ ಘೇವರಚಂದ ಕಾಲನಿಯ ಭಾರತಿ ಕೌಲಗಿ ಅವರು ಸಂತೋಷ ಪಾಂಡುರಂಗ ಬಜಬಳೆ, ಸಂದೀಪ ಭೀಮಶಿ ಯಡವೆ, ದಶರಥ ಬಪ್ಪು ಯಡವೆ ಎಂಬುವವರ ವಿರುದ್ಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಗಳ ಪತ್ತೆಗೆ ಎಸ್ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಎಲ್.ಅರಸಿದ್ದಿ, ಡಿಎಸ್‌ಪಿ ಕೆ.ಸಿ.ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಬಿ.ಪಾಲಭಾವಿ ನೇತೃತ್ವದಲ್ಲಿ ಪಿಎಸ್‌ಐ ಎಸ್.ಕೆ.ಲಂಗೂಟಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣ ತನಿಖೆ ಕೈಗೊಂಡ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net