ಬರದ ನಾಡಲ್ಲಿ ಮಲೆನಾಡ ಸೊಬಗು

Tikota 13-1
Published on

ತಿಕೋಟಾ: ಭಾನುವಾರ ಸುರಿದ ಮಳೆಗೆ ತಾಲೂಕಿನ ಹೊನವಾಡ, ಬಿಜ್ಜರಗಿ, ಹುಬನೂರು, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಸೋಮದೇವರಹಟ್ಟಿ ಭಾಗದ ಹಳ್ಳಗಳು ತುಂಬಿ ಹರಿಯುವ ಮೂಲಕ ಮಲೆನಾಡಿದ ಸೊಬಗು ಸೃಷ್ಟಿಸಿವೆ.

ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯ ಹತ್ತಿರ ಇರುವ ಬಾಂದಾರ ಮೈದುಂಬಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಅಣೆಕಟ್ಟುಗಳಿಂದ ಹೊರ ಬರುವ ನೀರಿನಂತೆ ಕಂಗೊಳಿಸುತ್ತ ನೀರು ಧುಮುಕುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net