ತಿಕೋಟಾದಲ್ಲಿ ಭಗತ್‌ಸಿಂಗ್ ಜನ್ಮದಿನಾಚರಣೆ

Tikota 28-1
Published on

ತಿಕೋಟಾ: ಸ್ವಾತಂತ್ರ ಹೋರಾಟದಲ್ಲಿ ಕ್ರಾಂತಿಯನ್ನೇ ಮಾಡಿದ ಭಗತ್‌ಸಿಂಗ್‌ರ ಜೀವನ ಯುವಕರಿಗೆ ಮಾದರಿಯಾಗಿದೆ ಎಂದು ಮುಖಂಡ ಶಂಕರ ಹಾಲಳ್ಳಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್‌ರ 114ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಸೋಮಶೇಖರ ಜತ್ತಿ, ಖಜಾಂಚಿ ಸದಾಶಿವ ಮಂಗಸೂಳಿ, ರೈತ ಮಿತ್ರ ಸಹಕಾರಿ ಸಂಘದ ನಿರ್ದೇಶಕ ಸುನೀಲ ನಾಲಾ, ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಹಣಮಂತ ಶೆಟ್ಟೆಣ್ಣವರ, ಕಾರ್ಯದರ್ಶಿ ವಿಠ್ಠಲ ಯಕ್ಕುಂಡಿ, ತಿಕೋಟಾ ಗಜಾನನ ಉತ್ಸವ ಸಮಿತಿ ಉಪಾಧ್ಯಕ್ಷ ಸಂತೋಷ ಮಾಳಿ, ನಿಂಗಪ್ಪ ಶಿರಹಟ್ಟಿ, ಅರವಿಂದ ಬಂಡಿ, ಗುರಯ್ಯ ಕಳ್ಳಿಮಠ, ರಮೇಶ ಸಿಂಧೂರ, ಮುರುಗೇಶ ಕನಮಡಿ, ಬಾಬು ಲೋಗಾಂವಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net