

ಹುಬ್ಬಳ್ಳಿ: ವಿಶ್ವ ಮಧ್ವ ಮಹಾಪರಿಷತ್ ನವನಗರ ಘಟಕದ ವತಿಯಿಂದ ಶ್ರೀಮದ್ ಜಯತೀರ್ಥರ ಆರಾಧನೆ ನಿಮಿತ್ತ ಜುಲೈ 11ರಿಂದ 13ರ ವರೆಗೆ ಶ್ರೀಟಿಕಾಚಾರ್ಯರ ಗ್ರಂಥ (ಜೀವನ ಚರಿತ್ರೆ) ಕುರಿತು ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭರತ ದೇಶಪಾಂಡೆ, ಮನೆ ಸಂಖ್ಯೆ 32/ಬಿ, ಕೆ.ಸಿ.ಸಿ. ಬ್ಯಾಂಕ್ ಕಾಲನಿ, ಸಹಸ್ರಾರ್ಜುನ ವೃತ್ತದ ಹತ್ತಿರ, ನವನಗರ ಇಲ್ಲಿ ನಿತ್ಯ ಸಂಜೆ 6.30ಕ್ಕೆ ಪಂ. ಬಾದರಾಯಣಾಚಾರ್ಯ ಮೈಸೂರ ಅವರು ಪ್ರವಚನ ನೀಡಲಿದ್ದಾರೆ. ಭಕ್ತರು ಪಾಲ್ಗೊಳ್ಳಬೇಕೆಂದು ಘಟಕದ ಸಂಚಾಲಕ ಪಂ. ರಮೇಶಾಚಾರ್ಯ ಹಿಪ್ಪರಗಿ ವಿನಂತಿಸಿದ್ದಾರೆ.