ತ.ನಾಡು-ಕರ್ನಾಟಕ ಗಡಿಯಲ್ಲಿ ಬಿಗಿ ಬಂದೋಬಸ್ತ್

26-GPT-3
Published on

ಗುಂಡ್ಲುಪೇಟೆ: ಕಾವೇರಿ ವಿವಾದಕ್ಕೆ ಸಂಬಂಧಿಸಿದ ತೀರ್ಪಿನಿಂದ ಉಂಟಾಗಬಹುದಾದ ಅನಾಹುತ ತಪ್ಪಿಸಲು ಎರಡೂ ರಾಜ್ಯಗಳ ಪೊಲೀಸರು ತಮ್ಮ ತಮ್ಮ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.


ಮಂಗಳವಾರ ಬೆಳಗ್ಗೆ 6ರಿಂದಲೇ ಬಂಡೀಪುರ ಹುಲಿ ಯೋಜನೆಯ ರಾಜ್ಯದ ಗಡಿಯಲ್ಲಿರುವ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲಿ ಜಿಲ್ಲಾ ಮೀಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಸರ್ಕಲ್ ಇನ್‌ಸ್ಪೆೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಪಟ್ಟಣದ ಪೊಲೀಸರು ಬಿಗಿ ಬಂದೋಬಸ್ತ್ ಆಯೋಜಿಸಿ ತಮಿಳುನಾಡು ನೋಂದಣಿ ವಾಹನಗಳ ಮೇಲೆ ಕಣ್ಣಿಟ್ಟಿದ್ದರು.


ನೆರೆಯ ಮಧುಮಲೈ ಅರಣ್ಯದ ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡಿನ ಪೊಲೀಸರು ತಮಿಳುನಾಡು ರಾಜ್ಯ ನೋಂದಣಿ ವಾಹನಗಳನ್ನು ಕರ್ನಾಟಕಕ್ಕೆ ಹೋಗದಂತೆ ತಡೆದಿದ್ದರಿಂದ ತಾಲೂಕಿನ ತರಕಾರಿ ಖರೀದಿಸಲು ಸಹ ತಮಿಳುನಾಡು ವರ್ತಕರು ಆಗಮಿಸಲಿಲ್ಲ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net