ಆಲಮಟ್ಟಿ ಅಣೆಕಟ್ಟೆಗೆ ಬಿಗಿ ಭದ್ರತೆ

Tight security at Almatti Dam
ಆಲಮಟ್ಟಿ ಲಾಲ್ ಬಹಾದೂರ್ ಶಾಸ್ತ್ರಿ ಅಣೆಕಟ್ಟೆ ಭದ್ರತೆಯಲ್ಲಿ ನಿರತ ಪೊಲೀಸರು.
Published on

ಆಲಮಟ್ಟಿ: ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಲಾಲ್‌ಬಹಾದೂರ್ ಶಾಸ್ತ್ರಿ ಅಣೆಕಟ್ಟೆಗೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಆಲಮಟ್ಟಿ ಉದ್ಯಾನಗಳು ಹಾಗೂ ಸಮೀಪದ ದೇವಸ್ಥಾನಗಳಿಗೆ ಪೊಲೀಸರ ಸರ್ಪಗಾವಲಿಡಲಾಗಿದೆ. ಜಲಾಶಯದ 1.5ಕಿ.ಮೀ. ವ್ಯಾಪ್ತಿ ಹಾಗೂ ಎರಡೂ ದಂಡೆಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಹಾಯಕ ಕಮಾಂಡೆಂಟ್ ಅರುಣ ಡಿ.ವಿ. ನೇತೃತ್ವದಲ್ಲಿ 85 ಜನ ಸಿಬ್ಬಂದಿ ಶಸಾಸ ಸಮೇತ ದಿನಕ್ಕೆ ಮೂರು ಪಾಳೆಯದಲ್ಲಿ ಭದ್ರತೆಯಲ್ಲಿ ತೊಡಗಿದ್ದಾರೆ.

36 ಗುಪ್ತ ಕ್ಯಾಮರಾ: ಜಲಾಶಯದ ಹಲವಾರು ಭಾಗಗಳಲ್ಲಿ 36 ಗುಪ್ತ ಕ್ಯಾವರಾಗಳನ್ನು ಅಳವಡಿಸಲಾಗಿದೆ. ಪ್ರತಿ ತಾಸಿಗೊಮ್ಮೆ ಅವಳಿ ಜಿಲ್ಲೆಯ ಎಸ್ಪಿಗಳಿಗೆ ಮಾಹಿತಿ ಕಳುಹಿಸಲಾಗುತ್ತಿದೆ. ಉಗ್ರರ ಕಣ್ಣು ಜಲಾಶಯದ ಮೇಲೆ ಬಿದ್ದಿರುವ ಯಾವುದೇ ಮಾಹಿತಿ ಇಲ್ಲ. ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಅವಳಿ ಜಿಲ್ಲೆಯ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ ಎಂದು ಕೆಬಿಜೆನ್ನೆಎಲ್ ಮುಖ್ಯ ಅಭಿಯಂತರ ಡಿ.ಬಸವರಾಜ ಹೇಳಿದರು. ನಮ್ಮಲ್ಲಿ ನಾಲ್ಕು ಚೆಕ್ ಪೋಸ್ಟ್‌ಗಳಿದ್ದು, ಅಲ್ಲಿ ಸರ್ಕಾರಿ ವಾಹನ ಸೇರಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.

ಉಗ್ರರು ಯಾವ ಮಾರ್ಗದಿಂದಲೂ ಇಲ್ಲಿಗೆ ಬರಲು ಸಾಧ್ಯವಿಲ್ಲ. ಸದಾ ಶಸಾಸಗಳ ಸಮೇತ ನಮ್ಮ ಸಿಬ್ಬಂದಿ ಕಾವಲು ಕಾಯುತ್ತಿರುತ್ತಾರೆ. ನಮ್ಮ ಸಿಬ್ಬಂದಿಗೆ ಹಲವಾರು ಅತ್ಯಾಧುನಿಕ ಶಸಾಸಗಳನ್ನು ಸರ್ಕಾರ ಒದಗಿಸಿದೆ. -ಅರುಣ ಡಿ.ವಿ., ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಹಾಯಕ ಕಮಾಂಡೆಂಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net