ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ; ಹಸು ಬಲಿ

12 SRI 01
Published on

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದೆ. ಗುರುವಾರ ರಾತ್ರಿ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಾಲ್ಕೇರಿ ಗ್ರಾಮದ ರಾಮಚಂದ್ರ ಅವರ ಕೊಟ್ಟಿಗೆಯಲ್ಲಿ ಕಟ್ಟಿದ ಮಿಶ್ರ ತಳಿಯ ಹಸುವನ್ನು ಕೊಂದು ಹಾಕಿದೆ.

ರಾತ್ರಿ 9.30 ಗಂಟೆ ಹೊತ್ತಿಗೆ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿತ್ತು. ಹಸುವಿನ ಅರಚಾಟ ಕೇಳಿ ಮನೆಯವರು ಬೊಬ್ಬೆ ಹಾಕಿದರು. ಈ ವೇಳೆ ಹುಲಿ ಕೊಟ್ಟಿಗೆಯಿಂದ ಹೊರಗೆ ಬಂದು ಕಾಫಿ ತೋಟದತ್ತ ನುಗ್ಗಿ ಮರೆಯಾಯಿತು. 

ರಾತ್ರಿ ಮತ್ತೆ ಕೊಟ್ಟಿಗೆಗೆ ಬಂದ ಹುಲಿ, ಕೊಂದ ಹಸುವನ್ನು 30 ಮೀಟರ್ ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿದೆ. ನರಹಂತಕ ಹುಲಿ ಕೊಲ್ಲಲು ನಾಲ್ಕು ದಿನದಿಂದ ಹೋರಾಟ ನಡೆಯುತ್ತಿರುವ ಕಾಲಘಟ್ಟದಲ್ಲಿ ಮತ್ತೊಮ್ಮೆ ಕೊಟ್ಟಿಗೆಯಲ್ಲಿದ್ದ ಹಸು ಕೊಂದು ಹಾಕಿರುವುದು ಜನವಲಯದಲ್ಲಿ ಆತಂಕ ಮತ್ತು ಮತ್ತಷ್ಟು ಭಯ ಸೃಷ್ಟಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net