ಮೂರು ಮರಿಗಳೊಂದಿಗೆ ಪ್ರಸಾಸಿಗರ ಕಣ್ಣಿಗೆ ಕಾಣಿಸಿಕೊಂಡ ಹೆಣ್ಣು ಹುಲಿ

Thursday sighted
ಬಂಡೀಪುರದ ತಾವರಕಟ್ಟೆ ಸಮೀಪ ಮೂರುಕೆರೆ ಫೀಮೇಲ್ ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿದೆ.
Published on

ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಗುರುವಾರ ಹೆಣ್ಣು ಹುಲಿ ತನ್ನ ಮೂರು ಮರಿಗಳ ಜತೆ ದರ್ಶನ ನೀಡಿದೆ.

ಮಧ್ಯಾಹ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಸಫಾರಿ ವಲಯದ ತಾವರೆಕಟ್ಟೆ ಬಳಿ ಮೂರುಕೆರೆ ಫೀಮೇಲ್ ಎಂದು ಕರೆಯಲಾಗುವ ಹೆಣ್ಣು ಹುಲಿ ತನ್ನ ಮೂರು ಮರಿಗಳ ಜತೆ ಕಾಣಿಸಿಕೊಂಡಿದೆ.

ಕಳೆದ ತಿಂಗಳು ಇದೇ ಪ್ರದೇಶದಲ್ಲಿ ಇದು ಮೊದಲ ಬಾರಿಗೆ ತನ್ನ ಮರಿಗಳ ಜತೆ ಕಾಣಿಸಿಕೊಂಡಿತ್ತು. ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net