ಬಾರೆ ರಸ್ತೆಯಲ್ಲಿ ಹುಲಿಯ ದರ್ಶನ

tiger
Published on

ಕಾರವಾರ: ತಾಲೂಕಿನ ಮಲ್ಲಾಪುರ-ಕೈಗಾ-ಬಾರೆ ರಸ್ತೆಯಲ್ಲಿ ಹುಲಿಯೊಂದು ಕಾರಿಗೆ ಅಡ್ಡ ಬಂದಿದ್ದು, ವಿಡಿಯೋ ವೈರಲ್‌ ಆಗಿದೆ.
ಬೃಹತ್‌ ಹುಲಿಯೊಂದು ರಸ್ತೆ ಬದಿಯಲ್ಲೇ ನಿಂತು ಕಾರಿನಲ್ಲಿ ಜನರನ್ನು ನೋಡಿ ಘರ್ಜಿಸುತ್ತದೆ.

ನಂತರ ಕೆಲವೇ ಕ್ಷಣದಲ್ಲಿ ಕಾಡಿನಲ್ಲಿ ಮಾಯವಾಗುತ್ತದೆ. ಕೈಗಾ ಎನ್‌ಪಿಸಿಐಎಲ್‌ ಉದ್ಯೋಗಿ ಚೇತನ್‌ ತೇಲ್ಕರ್‌ ಈ ಹುಲಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ಬಫರ್‌ ವಲಯ ಇದಾಗಿದೆ. ಈ ಹಿಂದೆಯೂ ಇದೇ ರಸ್ತೆಯಲ್ಲಿ ಹುಲಿಯೊಂದರ ವಿಡಿಯೋ ವೈರಲ್‌ ಆಗಿತ್ತು.

ಕೈಗಾ ಅಣು ವಿದ್ಯುತ್‌ ಸ್ಥಾವರದಿಂದ ಯಲ್ಲಾಪುರಕ್ಕೆ ತಲುಪಬಹುದಾದ ಕಡಿದಾದ, ದಡ್ಡ ಕಾಡಿನ ಮಧ್ಯೆ ಚಲಿಸುವ ರಸ್ತೆ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net