ಕಮರಿ ಕೆಳಗಿನ ಕಲ್ಲಿನ ಮೇಲೆ ಹುಲಿ ದರ್ಶನ

Oplus_0
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕಮರಿ ಕಲ್ಲಿನ ಮೇಲೆ ಕಂಡು ಬಂದ ಹುಲಿ.
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಪಕ್ಕದಲ್ಲಿರುವ ಕಮರಿ ಕೆಳಗಿನ ಕಲ್ಲಿನಲ್ಲಿ ಶುಕ್ರವಾರ ಸಂಜೆ ಹುಲಿ ದರ್ಶನ ನೀಡಿದೆ.

ಹುಲಿ ಬೇಟೆಯಾಡಿ ಇಲ್ಲಿರುವ ದೊಡ್ಡ ಕಲ್ಲಿನ ಮೇಲೆ ಮಲಗಿ ಆಹಾರ ಸೇವಿಸುತ್ತಿತ್ತು. ಈ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲೇ ಇತ್ತು. ಬೇಟೆಯಾಡಿದ ಪ್ರಾಣಿಯ ಮಾಂಸ ತಿಂದ ಬಳಿಕ ಕಲ್ಲಿನ ಮೇಲೆಯೇ ನಿದ್ರಿಸಿ ನಂತರ ಅಲ್ಲಿಂದ ಅರಣ್ಯದತ್ತ ತೆರಳಿದೆ.

ಈ ದೃಶ್ಯದ ವಿಡಿಯೋ ಹಾಗೂ ಫೋಟೋವನ್ನು ದೇಗುಲಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net