

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಸಫಾರಿ ತೆರಳಿದ್ದ ವೇಳೆ ವ್ಯಾಘ್ರವೊಂದು ದರ್ಶನ ನೀಡಿದ್ದು, ಪ್ರವಾಸಿಗರು ಫಿದಾ ಆಗಿದ್ದಾರೆ.
ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಸುಮಾರು ಹತ್ತು ಮಂದಿ ಇದ್ದ ಪ್ರವಾಸಿಗರ ತಂಡ ಸಫಾರಿಗೆ ತೆರಳಿದ್ದ ವೇಳೆ ಗಂಡು ಹುಲಿ ಕಾಣಿಸಿಕೊಂಡಿದೆ. ಮರದ ಮೇಲೆ ಕುಳಿತಿದ್ದ ಹುಲಿಯ ಭಂಗಿಯನ್ನು ನೋಡಿ ಪ್ರವಾಸಿಗರು ಖುಷಿಯಾದರು.
ಸುಮಾರು ಅರ್ಧಗಂಟೆ ಕಾಲ ಅದೇ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಂತೆ ಕುಳಿತಿದ್ದ ಹುಲಿ ಪ್ರವಾಸಿಗರು ಫೋಟೋ ತೆಗೆಯುವಾಗ ಹಲವು ಬಾರಿ ಕ್ಯಾಮರಾ ಕ್ಲಿಕ್ಕಿಸಿದರೂ ವಿಚಲಿತವಾಗದೆ ಲುಕ್ ನೀಡಿ ವಿಸ್ಮಯ ಮೂಡಿಸಿತು.