

ಹುಬ್ಬಳ್ಳಿ: ಬಾಲಿವುಡ್ನ ಬಹುಬೇಡಿಕೆಯ ನಟ ಟೈಗರ್ ಶ್ರಾಫ್ ಅವರನ್ನು ಹುಬ್ಬಳ್ಳಿಯ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ಅವರು ಮುಂಬೈನಲ್ಲಿ ಭೇಟಿಯಾಗಿ, ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ರ್ಚಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟೈಗರ್ ಶ್ರಾಫ್, ನಟ ಪುನಿತ್ ರಾಜಕುಮಾರ ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ತಂದೆ ಜಾಕಿ ಶ್ರಾಫ್ ಅವರು ಕೇರ್ ಆಫ್ ಫುಟ್ ಪಾತ್, ಅಣ್ಣ ಬಾಂಡ್ ಮತ್ತು ಅಮಾನುಷ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ವಿಎಕೆ ಫೌಂಡೇಷನ್ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು ಹಾಗೂ ನಿಮ್ಮ ಚಟುವಟಿಕೆಗಳು ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಚಂದನ ಬಂಕಾಪುರ, ಸುನಿಲ ಕಾಟವೆ, ಸಚಿನ ಪೂಜಾರಿ, ಆನಂದ್ ಬಾಕಳೆ, ಗಜು ಜರತಾರಘರ, ಆಕಾಶ ರಂಗ್ರೇಜ್, ಶ್ರೀಧರ ಕಲ್ಬುರ್ಗಿ, ಸಾಯಿ ಕಠಾರೆ, ಅರುಣ ಮೆಹರವಾಡೆ, ದಾನೇಶ ಕಠಾರೆ, ರೋಹನ್ ಇರಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.