ಬಾನಂಗಳದಲ್ಲಿ ಗರ್ಜಿಸಿದ ‘ವ್ಯಾಘ್ರ’ ಗಿನ್ನೆಸ್ ದಾಖಲೆಗೆ

67d55b5c-eae5-4f32-8346-6c9815257790
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಬನ್ನಿಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ ಕಲಾಕೃತಿ ರಚನೆ ಗಿನ್ನೆಸ್ ದಾಖಲೆ ಸೇರಿತು.

ದಸರಾ ಮಹೋತ್ಸವ ಸಮಿತಿ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಆಯೋಜಿಸಿದ್ದ ಪ್ರದರ್ಶನದಲ್ಲಿ ಬಾನಂಗಳದಲ್ಲಿ 2983 ಡ್ರೋನ್‌ಗಳನ್ನು ಬಳಸಿ ಮೂಡಿಸಿದ ರಾಷ್ಟ್ರೀಯ ಪ್ರಾಣಿ ಹುಲಿಯ ಕಲಾಕೃತಿ ರಚಿಸಿದವು.

ಸ್ಥಳದಲ್ಲಿದ್ದ ಗಿನ್ನೆಸ್ ದಾಖಲೆ ಸಮಿತಿ ಸದಸ್ಯರು, ಇದನ್ನು ದಾಖಲೆಗೆ ಸೇರಿರುವುದನ್ನು ಘೋಷಿಸುತ್ತಿದ್ದಂತೆಯೇ ಬನ್ನಿಮಂಟಪದಲ್ಲಿ ಕಿಕ್ಕಿರಿದು ತುಂಬಿದ್ದ 50 ಸಾವಿರಕ್ಕೂ ಹೆಚ್ಚು ಜನರು ಕೇಕೆ, ಚಪ್ಪಾಳೆ, ಸಿಳ್ಳೆ ಮೂಲಕ ಸ್ವಾಗತಿಸಿದರು.

ಈ ಹಿಂದೆ ಯೋಗದಲ್ಲಿ ದಾಖಲೆ ನಿರ್ಮಿಸಿದ್ದ ಮೈಸೂರಿನಲ್ಲಿ ಈಗ ಹೊಸ ದಾಖಲೆ ಮೂಲಕ ನಗರದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net