

ಸುಂಟಿಕೊಪ್ಪ: ಹಾಲೇರಿ ಕಾಂಡನಕೊಲ್ಲಿ ಗ್ರಾಮದಲ್ಲಿ ಹುಲಿ ಸಂಚಾರ ಕಂಡು ಬಂದಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಹಾಲೇರಿಯ ಬಿಜ್ಜಂಡ ಸುಬ್ರಮಣಿ ತೋಟದಿಂದ ಇಳಿದು ಮುದ್ವರ ಬೋಪಯ್ಯ ಅವರ ಗದ್ದೆಯಿಂದ ಬಾರಿಕೆ ತೋಟಕ್ಕೆ ಹೋಗಿರುವ ಸುಳಿವು ಸಿಕ್ಕಿದೆ. ಯಶೋದರ ತೋಟದ ಮಾಲೀಕರು ವಾಯುವಿಹಾರಕ್ಕೆ ತೆರಳಿದಾಗ ಹುಲಿಯ ಹೆಜ್ಜೆ ಗುರುತು ಹಾಗೂ ರಕ್ತದ ಕಲೆಗಳು ಕಂಡು ಬಂದಿದೆ. ಇದು ಹುಲಿಯ ರಕ್ತದ ಅಥವಾ ಪ್ರಾಣಿ ಬಲಿ ತೆಗೆದುಕೊಂಡಿದ್ದೀಯಾ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ತವನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಹುಲಿ ಸಂಚಾರವಾಗಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.