

ಬೆಳಗಾವಿ: ಇಲ್ಲಿನ ಭೂತರಾಮನಹಟ್ಟಿ ಮೃಗಾಲಯದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ (ಶೌರ್ಯ)ಅಪರೂಪದ ರೋಗತಳಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ವನ್ಯವೈದ್ಯ ಡಾ. ಮದನ್ ಕೋಮಪಾಲ ಯಶಸ್ವಿಯಾಗಿದ್ದಾರೆ.
ಅರಣ್ಯಾಧಿಕಾರಿಗಳು ಹಾಗೂ ವನ್ಯವೈದ್ಯರ ತೀವ್ರ ಪ್ರಯತ್ನದಿಂದ ಶೌರ್ಯ ಸದ್ಯ ತನ್ನ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾನೆ. ವನ್ಯಮೃಗಗಳನ್ನು ಆಹುತಿ ಪಡೆಯುತ್ತಿದ್ದ, ವನ್ಯ ವೈದ್ಯರಿಗೆ ಸಹಜವಾಗಿ ಗುರುತಿಸಲಾಗದ ಅಪರೂಪದ ಖಾಯಿಲೆಗಳನ್ನು ಕೊನೆಗೂ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.
ಹಲವು ದಿನಗಳಿಂದ ವಾಂತಿ, ಬೇದಿ, ಸುಸ್ತು ಅನುಭವಿಸುತ್ತಿದ್ದ, ಆಹಾರ ಸೇವನೆ ತ್ಯಜಿಸಿದ್ದ ಶೌರ್ಯನ ಆರೋಗ್ಯ ಸುಧಾರಿಸಲು ಅರಣ್ಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ರಾಜ್ಯದ ಹಲವು ಲ್ಯಾಬ್ ಗಳಲ್ಲಿ ಶೌರ್ಯನಿಗೆ ಬಂದೊದಗಿರುವ ರೋಗ ತಪಾಸಣೆಗೆ ಪ್ರಯತ್ನಿಸಲಾಗಿತ್ತು. ಆದರೆ, ಚೇತರಿಸಿಕೊಂಡಿರಲಿಲ್ಲ. ಇದೀಗ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುತ್ತಿರುವುದರಿಂದ ಶೌರ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೌರ್ಯನ ಚೇತರಿಕೆ ನಮಗೆಲ್ಲ ಸಂತಸ ಉಂಟು ಮಾಡಿದೆ ಎಂದು ’ಝೂ’ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ತಿಳಿಸಿದ್ದಾರೆ.
ಫೋಟೋ
2ಮಂಜು7-ಬೆಳಗಾವಿ ನಗರದ ಭೂತರಾಮನಹಟ್ಟಿ ಮೃಗಾಲಯದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ (ಶೌರ್ಯ)