ಹುಲಿಗಳ ಹೆಜ್ಜೆ ಗುರುತು ಪತ್ತೆ

25-JUNE-GPT-1
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಪತ್ತೆಯಾದ ಹುಲಿಹೆಜ್ಜೆ ಗುರುತುಗಳನ್ನು ಅರಣ್ಯ ಸಿಬ್ಬಂದಿ ಪರಿಶೀಲಿಸಿದರು.
Published on

ಗುಂಡ್ಲುಪೇಟೆ: ತಾಲೂಕಿನ ಗೋಪಾಲಪುರ ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಮತ್ತೆ ಹುಲಿಗಳು ಸಂಚರಿಸಿದ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ಜಮೀನುಗಳಲ್ಲಿ ಕೆಲವು ತಿಂಗಳ ಹಿಂದೆ ಮರಿ ಹಾಕಿದ್ದ ತಾಯಿ ಹುಲಿ ಮತ್ತೆ ತನ್ನ ಮರಿಗಳೊಂದಿಗೆ ವಾಪಸಾಗಿದೆ. ಇತ್ತೀಚೆಗೆ ಮಳೆ ಬಿದ್ದಿರುವುದರಿಂದ ಗ್ರಾಮದ ಪ್ರಗತಿಪರ ರೈತ ಜಿ.ಜಿ.ಮಲ್ಲಿಕಾರ್ಜುನಪ್ಪ ಅವರು ಈರುಳ್ಳಿ ಬೆಳೆದಿರುವ ಜಮೀನಿನ ಮಣ್ಣಿನಲ್ಲಿ ತಾಯಿ ಮತ್ತು ಮರಿಗಳ ಹೆಜ್ಜೆ ಗುರುತುಗಳು ಮೂಡಿವೆ. ಅಲ್ಲದೆ ಬೆಳ್ಳುಳ್ಳಿ ಜಮೀನಿನಲ್ಲಿ ಮಲಗಿ ಒದ್ದಾಡಿರುವ ಗುರುತುಗಳು ಮಣ್ಣಿನಲ್ಲಿ ಕಂಡುಬಂದಿದ್ದರಿಂದ ಈರುಳ್ಳಿ ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಕಟಾವು ಮಾಡದೆ ವಾಪಸಾಗಿದ್ದಾರೆ. ಅಲ್ಲದೆ ಹುಲಿ ಮತ್ತು ಮರಿಗಳು ಅಕ್ಕಪಕ್ಕದ ಚೆಂಡುಮಲ್ಲಿಗೆ ಬೆಳೆದಿರುವ ಜಮೀನುಗಳತ್ತ ಹೋಗಿರುವುದರಿಂದ ಅವು ಅಕ್ಕಪಕ್ಕದಲ್ಲಿಯೇ ಇರಬಹುದು ಎಂಬ ಭೀತಿಗೊಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಫಾರೆಸ್ಟರ್ ಶ್ರೀಕಾಂತ್, ಮೋಹನ್ ಹಾಗೂ ಸಿಬ್ಬಂದಿ ಹುಲಿಗಳ ಹೆಜ್ಜೆ ಗುರುತುಗಳನ್ನು ಆಧರಿಸಿ ಅವುಗಳ ಚಲನವಲನ ಪರಿಶೀಲಿಸಿದರು. ಕಳೆದ ಒಂದು ವಾರದಿಂದ ಹುಲಿಗಳು ಇದೇ ಪ್ರದೇಶದಲ್ಲಿ ಸುತ್ತಾಡುತ್ತಿರುವುದರಿಂದ ಅವುಗಳನ್ನು ಕಾಡಿಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರ ಆಗ್ರಹಕ್ಕೆ ಮಣಿದ ಅರಣ್ಯ ಇಲಾಖೆ ಮಧ್ಯಾಹ್ನ ಕೂಂಬಿಂಗ್ ನಡೆಸುವ ಮೂಲಕ ಹುಲಿಗಳನ್ನು ಕಾಡಿಗಟ್ಟುವ ಕೆಲಸ ಆರಂಭಿಸಿದರು. ಹುಲಿಗಳ ಹೆಜ್ಜೆ ಗುರುತುಗಳು ಕಂಡು ಬಂದ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ.

===================

ಫೋಟೋ 3 ಇವೆ

25-ಜೂನ್-ಜಿಪಿಟಿ-1

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಪತ್ತೆಯಾದ ಹುಲಿಹೆಜ್ಜೆ ಗುರುತುಗಳು.

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಪತ್ತೆಯಾದ ಹುಲಿಹೆಜ್ಜೆ ಗುರುತುಗಳನ್ನು ಅರಣ್ಯ ಸಿಬ್ಬಂದಿ ಪರಿಶೀಲಿಸಿದರು.

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಪತ್ತೆಯಾದ ಹುಲಿಗಳ ಪತ್ತೆಗೆ ಅರಣ್ಯ ಸಿಬ್ಬಂದಿ ಕ್ಯಾಮೆರಾ ಅಳವಡಿಸಿದ್ದಾರೆ.

===============

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net