ವಿಶೇಷಚೇತನರಿಗೆ ಸೌಲಭ್ಯ ಒದಗಿಸಲು ಸಿದ್ಧ

DISABLDE
ಹುಲಿಹೈದರ ಗ್ರಾಮದಲ್ಲಿ ವಿಶೇಷಚೇತನರ ಯುಡಿಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು ಉದ್ಘಾಟಿಸಿದರು. ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯೆ ಸುನೀತಾ ಹನುಮೇಶ್, ಕನಕರಾಯ ಪೂಜಾರಿ ಇತರರಿದ್ದರು.
Published on

ಕನಕಗಿರಿ: ವಿಶೇಷಚೇತನರಿಗೆ ಗ್ರಾಪಂನಿಂದ ದೊರೆಯಬೇಕಾದ ವಿಶೇಷ ಅನುದಾನ, ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹುಲಿಹೈದರ ಗ್ರಾಪಂ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಹೇಳಿದರು.

ಹುಲಿಹೈದರ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷಚೇತನರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶೇಷಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಟ್ಟರೆ ಕೊಡುವ ಕೆಲಸವಾಗಬೇಕು. ಗ್ರಾಪಂ ವ್ಯಾಪ್ತಿಯಲ್ಲಿರುವ ವಿಶೇಷಚೇತನರಿಗೆ ನಮ್ಮ ಗ್ರಾಪಂನಿಂದ ವಿಶೇಷ ಅನುದಾನ ನೀಡಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯೆ ಸುನೀತಾ ಹನುಮೇಶ್, ಪ್ರಮುಖರಾದ ಕನಕರಾಯ ಪೂಜಾರಿ, ರಾಜ್ಯ ವಿಕಲಚೇತನರ ಪಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷ ರಾಮಪ್ಪ ರಾಥೋಡ, ರಾಮಣ್ಣ ಕುರಿ, ಹನುಮೇಶ ಅಡವಿಬಾವಿ, ಲಕ್ಷ್ಮಣ ವಡಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net