ವಿಜೃಂಭಣೆಯ ಹುಲಿವಾಹನೋತ್ಸವ

21-KRP-1
ಕೆ.ಆರ್.ಪೇಟೆ ತಾಲೂಕಿನ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ಮಲೆ ಮಹದೇಶ್ವರರ ದೇವಸ್ಥಾನದಲ್ಲಿ ಹುಲಿವಾಹನೋತ್ಸವ ಅದ್ದೂರಿಯಾಗಿ ನಡೆಯಿತು. ನೂರಾರು ಭಕ್ತರು ಮಹದೇಶ್ವರ ಹುಲಿವಾಹನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
Published on

ಕೆ.ಆರ್.ಪೇಟೆ: ತಾಲೂಕಿನ ತ್ರಿವೇಣಿ ಸಂಗಮದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಸೋಮವಾರ ಹುಲಿವಾಹನೋತ್ಸವ ಅದ್ದೂರಿಯಾಗಿ ನಡೆಯಿತು.

ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಉಘೇ ಮಾದಪ್ಪ ಉಘೇ, ಉಘೇ ಮಹದೇಶ್ವರ… ಎಂಬ ಜಯಘೋಷಗಳು ಮೊಳಗಿದವು. ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ, ಅಂಬಿಗರಹಳ್ಳಿ ಸಂಗಾಪುರ ತ್ರಿವಳಿ ಗ್ರಾಮಗಳ ಪಕ್ಕದಲ್ಲಿರುವ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ಸೇರಿದಂತೆ ಮೂರು ನದಿಗಳು ಒಂದಾಗಿ ಸೇರುವ ತ್ರಿವೇಣಿ ಸಂಗಮದ ಬಳಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net