ಕಬಿನಿ ಹಿನ್ನೀರಿನ ಬಳಿ ಹುಲಿ ಸೆರೆ

tiger
Published on

ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಕಬಿನಿ ಹಿನ್ನೀರಿನ ಸಮೀಪದ ಜಮೀನಿನಲ್ಲಿ ಸೆರೆ ಸಿಕ್ಕ 7-8 ವರ್ಷದ ಗಂಡು ಹುಲಿಯನ್ನು ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನಕ್ಕೆ ಕಳುಹಿಸಲಾಗಿದೆ.

ಕೆಳ ದವಡೆ ಸ್ವಲ್ಪ ಸವೆದಿದ್ದರಿಂದ ಹುಲಿಯು ಆಹಾರ ಅರಸಿ ಕಾಡಿನಿಂದ ಹೊರಗೆ ಬರುತ್ತಿತ್ತು. ಕೆಲವು ದಿನಗಳಿಂದ ಬಳ್ಳೆ ಹಾಡಿ ಸಮೀಪ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಹುಲಿ 15 ದಿನಗಳ ಹಿಂದೆ ಮಗ್ಗೆ ಗ್ರಾಮದ ಬಳಿ ಜಾನುವಾರು ಕೊಂದು ತಿಂದಿತ್ತು. ಶನಿವಾರ ಈ ಹುಲಿ ಕಬಿನಿ ಹಿನ್ನೀರಿನ ರೆಸಾರ್ಟ್ ಬಳಿ ಬೆಳಗ್ಗೆ 7 ಗಂಟೆಗೆ ಸುತ್ತಮುತ್ತಲಿನ ಜಮೀನಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಬಿದ್ದಿತ್ತು. ಭಾನುವಾರ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಯಿತು. ದೇಹದ ಮೇಲೆ ಅಲ್ಲಲ್ಲಿ ಸಣ್ಣ ಗಾಯದ ಗುರುತುಗಳಿದ್ದು, ಮತ್ತೊಂದು ಹುಲಿಯೊಂದಿಗೆ ಕಾದಾಟದಿಂದ ಗಾಯಗಳಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net