ಮಹದಾಯಿ ಕಣಿವೆಗೆ ಸೋಮವಾರ ಹುಲಿ ಪ್ರಾಧಿಕಾರದ ಸಮಿತಿ ಭೇಟಿ

MAHADAYI
Published on

ನರಗುಂದ: ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರಧಾನಿಗೆ ನಿರಂತರ ಪತ್ರ ಬರೆದಿದ್ದರಿಂದ ಸೂಕ್ತ ಸ್ಪಂದನೆ ದೊರಕಿದ್ದು, ಜ.8ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐದು ಜನರ ಸಮಿತಿ ಮಹದಾಯಿ ಭಾಗದ ಕಿರುಹಳ್ಳಗಳ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ರೈತ ಸೇನಾ ಅಧ್ಯಕ್ಷ ವೀರೇಶಸ್ವಾಮಿ ಸೊಬರಮದಮಠ ತಿಳಿಸಿದರು. ಪಟ್ಟಣದ ಮಹದಾಯಿ ಹೋರಾಟದ 3097ನೇ ದಿನದ ವೇದಿಕೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡುವಂತೆ ವನ್ಯಜೀವಿ ಪ್ರಾಧಿಕಾರದಿಂದ ಅರ್ಜಿ ಸಲ್ಲಿಸಬೇಕು. ಜ.8ರಂದು ಬರಲಿರುವ ಸಮಿತಿಗೆ ರಾಜ್ಯದಿಂದ ಎಲ್ಲ ಮಾಹಿತಿ ಒದಗಿಸಬೇಕು ಎಂದರು. ದ್ವೇಷ, ಅಸೂಯೆಯ ರಾಜಕಾರಣ ಕಳಸಾ,ಬಂಡೂರಿ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ಆಪಾದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net