ಮೇಯುತ್ತಿದ್ದ ಆನೆಯ ಮೇಲೆ ಹುಲಿ ದಾಳಿ

ಮೇಯುತ್ತಿದ್ದ ಆನೆಯ ಮೇಲೆ ಹುಲಿ ದಾಳಿ
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ಗುಂಪಾಗಿ ಹುಲ್ಲು ಮೇಯುತ್ತಿದ್ದ ಆನೆಯ ಮೇಲೆ ಹುಲಿ ದಾಳಿ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಆನೆಗಳ ಹಿಂಡಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿ, ಆನೆಯ ಕಾಲಿನ ಸಮೀಪ ಎರಗಿದೆ. ಇದರಿಂದ ತಕ್ಷಣ ಎಚ್ಚೆತ್ತ ಆನೆಗಳ ಹಿಂಡು ಘೀಳಿಟ್ಟು ಹುಲಿಯನ್ನು ಹಿಮ್ಮೆಟ್ಟಿಸಿದೆ. ಈ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ಸ್ಥಳದಲ್ಲಿ ಹುಲಿಯೊಂದು ಆನೆ ಮರಿಯನ್ನು ಬೇಟೆಯಾಡಿ ಕೊಂದು ಹಾಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net