ಕೃಷಿ ಕೆಲಸಗಾರನ ಮೇಲೆ ಹುಲಿ ದಾಳಿ: ಗೊರವಾಲೆ ಗ್ರಾಮದ ಸಮೀಪ ಘಟನೆ

Tiger attacks farm worker Mandya
Published on

ಮಂಡ್ಯ: ತಾಲೂಕಿನ ಗೊರವಾಲೆ ಗ್ರಾಮದ ಸಮೀಪ ಜಮೀನಿನಲ್ಲಿ ಸೊಪ್ಪು ಕತ್ತರಿಸುವ ವೇಳೆ ಹುಲಿ ದಾಳಿ ನಡೆಸಿ ಕೃಷಿ ಕೆಲಸಗಾರರನ್ನು ದಾಳಿ ನಡೆಸಿದೆ.

ಗ್ರಾಮದ ತಿರುಮಲೆ (60) ಎಂಬಾತನ ಮೇಲೆ ದಾಳಿ ನಡೆಸಿದೆ. ಈತ ಕಳೆದ 15 ವರ್ಷದಿಂದ ಸ್ಥಳೀಯರ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಂತೆ ಆಡುಗಳಿಗೆ ಸೊಪ್ಪು ಕತ್ತರಿಸುತ್ತಿದ್ದಾಗ ಏಕಾಏಕಿ ಹುಲಿ ದಾಳಿ ನಡೆಸಿದೆ. ಇದರಿಂದ ಗಾಬರಿಗೊಂಡ ತಿರುಮಲೆ, ಕೂಡಲೇ ಕಿರುಚಿಕೊಂಡು ಕೈಯಲ್ಲಿದ್ದ ಕುಡುಗೋಲಿನಿಂದ ಹುಲಿ ಮೇಲೆ ಪ್ರತಿ ದಾಳಿ ನಡೆಸಲು ಮುಂದಾಗಿದ್ಧಾರೆ. ಅಷ್ಟರಲ್ಲಿ ಸ್ಥಳೀಯರು ಅತ್ತ ದೌಡಾಯಿಸಿದಾಗ ಹುಲಿ ಅಲ್ಲಿಂದ ಕಣ್ಮರೆಯಾಗಿದೆ ಎಂದು ಹೇಳಲಾಗುತ್ತಿದೆ. ದಾಳಿಯಿಂದ ತಿರುಮಲೆ ಅವರ ಬಲ ತೊಡೆ, ಬಲಗೈ ಮೇಲೆ ಗಾಯಗಳು ಉಂಟಾಗಿವೆ. ಸಧ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಹುಲಿಯೋ, ಚಿರತೆಯೋ ಗೊಂದಲ?

ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೆಜ್ಜೆ ಗುರುತು ತಪಾಸಣೆ ನಡೆಸಿದಾಗ ಚಿರತೆ ಹೆಜ್ಜೆಗಳಂತೆ ಕಂಡುಬಂದಿದೆ. ಆದರೆ ಯಾವ ಪ್ರಾಣಿ ಎನ್ನುವುದನ್ನು ಖಚಿತವಾಗಿಲ್ಲ. ಮನುಷ್ಯನ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸೆರೆ ಹಿಡಿಯಲು ಕ್ರಮ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net