

ನಂಜನಗೂಡು: ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಒಂದು ಹಸುವನ್ನು ಕೊಂದು 2 ಹಸುಗಳನ್ನ್ನು ಗಾಯಗೊಳಿಸಿದೆ.
ಶುಕ್ರವಾರ 11 ಗಂಟೆಯಲ್ಲಿ ಗ್ರಾಮದ ರೈತರದ ನಿಜಲಿಂಗಪ್ಪ ಮತ್ತು ಮಹೇಶ್ ಅವರು ಮೂರು ಹಸುಗಳನ್ನು ಜಮೀನಿಗೆ ಮೇಯಿಸಲು ತೆರಳಿದ್ದರು. 15 ದಿನಗಳಿಂದ ಮಡುವಿನಹಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಹಿನ್ನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೋನು ಇರಿಸಿ, ಕ್ಯಾಮರಾ ಅಳವಡಿಸಿದ್ದರು. ಕ್ಯಾಮರಾದಲ್ಲಿ ಹುಲಿಗಳ ಓಡಾಟದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಇದರ ಬೆನ್ನಲ್ಲೆ ಶುಕ್ರವಾರ ಹಸುಗಳ ಮೇಲೆ ದಾಳಿ ಮಾಡಿ ನಿಜಲಿಂಗಪ್ಪ ಅವರ ಹಸು ಬಲಿಪಡೆದ ಹುಲಿ, ಮಹೇಶ್ ಅವರ ಮತ್ತೆರಡು ಹಸುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್, ಕಿರಣ್ ಸ್ಥಳ ಪರಿಶೀಲಿಸಿದರು.