ಹಸುವಿನ ಮೇಲೆ ಹುಲಿ ದಾಳಿ

tiger
Published on
  • ಸರಗೂರು : ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಣಿಮುಂಟಿ ಗ್ರಾಮದಲ್ಲಿ ಇತ್ತೀಚೆಗೆ ಕಬ್ಬಿನ ಗದ್ದೆಯ ಬಳಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
    ಹುಸುವಿನ ಮೇಲೆ ದಾಳಿ ಮಾಡಿದ ಹುಲಿಯು ಅದನ್ನು ಕಬ್ಬಿನ ಗದ್ದೆಗೆ ಎಳೆದೊಯ್ದಿದೆ. ಜಮೀನಿನ ಮಾಲೀಕ ನಿಂಗರಾಜು, ಎಂದಿನಂತೆ ಜಮೀನಿಗೆ ತೆರಳುತ್ತಿದ್ದಾಗ ಹುಲಿಯು ಆತ ಮೇಲೆಯೂ ದಾಳಿಗೆ ಮುಂದಾಗಿದ್ದು, ಆತ ತಪ್ಪಿಸಿಕೊಂಡು ಬಂದಿದ್ದಾನೆ.
    ಜಮೀನಿನಲ್ಲಿ ಹುಲಿಯ ಹೆಜ್ಜೆಯ ಗುರುತುಗಳು ಕೂಡ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಹುಲಿ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net