ಹೊನ್ನಿಕೊಪ್ಪಲಿನಲ್ಲಿ ಹುಲಿ ಪ್ರತ್ಯಕ್ಷ

tiger-007
Published on

ಗೋಣಿಕೊಪ್ಪ: ರುದ್ರಬೀಡು ಸಮೀಪದ ಹೊನ್ನಿಕೊಪ್ಪಲಿನಲ್ಲಿ ಹಾಡಹಗಲೇ ಹುಲಿ ಕಾಡು ಹಂದಿಯನ್ನು ಕೊಂದಿದ್ದು, ಜನರು ಭಯಭೀತರಾಗಿದ್ದಾರೆ.
ಗ್ರಾಮದ ಪ್ರಶಾಂತ್ ಅವರ ಕಾಫಿತೋಟದಲ್ಲಿ ಹುಲಿ ಕಾಡುಹಂದಿಯನ್ನು ಕೊಂದು ಹಾಕಿದ್ದು, ಕಳೇಬರ ಪತ್ತೆಯಾಗಿದೆ. ಎರಡು-ಮೂರು ದಿನಗಳ ಹಿಂದೆ ಕಾಡುಹಂದಿಯನ್ನು ಬಲಿ ಪಡೆದಿದೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಕಾಫಿತೋಟಕ್ಕೆ ಕೆಲಸಕ್ಕೆಂದು ತೆರಳಿದ್ದ ಕಾರ್ಮಿಕರು, ಹುಲಿಯನ್ನು ಕಂಡು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೋನು ಇಡಲು ಸಿದ್ಧತೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net