ತಿಗಡಿಗೆ ಬಸ್ ವ್ಯವಸ್ಥೆಯಾಗಲಿ

web3
ತಿಗಡಿ ಗ್ರಾಮದಲ್ಲಿ ಬಸ್ ಸಂಚಾರ ತಡೆದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಾಬು ಪಾಟೀಲ, ಯಲ್ಲಪ್ಪ ನಾಯ್ಕರ, ಮಂಜು ಮರಾಠೆ, ಬಸು ಕೊಟಗಿ ಇತರರಿದ್ದರು.
Published on

ಬೈಲಹೊಂಗಲ: ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಬಸ್ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶಾಲಾ-ಕಾಲೇಜು ವೇಳೆಗೆ ಬಸ್ ಬಾರದ್ದರಿಂದ ಪ್ರತಿದಿನ ಶಿಕ್ಷಣಕ್ಕೆ ಅಡಚಣೆಯಾಗುತ್ತಿದೆ. ಮರಕಟ್ಟಿಯಿಂದ ಬಂದಾಗ ಬಸ್ ಪ್ರಯಾಣಿಕರಿಂದ ತುಂಬಿರುತ್ತದೆ. ಕೂಡಲೇ ಹೆಚ್ಚಿನ ಬಸ್‌ಗಳನ್ನು ಕಲ್ಪಿಸಬೇಕೆಂದು ಸಾರಿಗೆ ವ್ಯವಸ್ಥಾಪಕರನ್ನು ಒತ್ತಾಯಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳು, ಗ್ರಾಮಸ್ಥರು ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಮತ್ತೊಂದು ಬಸ್ ವ್ಯವಸ್ಥೆ ಮಾಡಿದಾಗ ಪ್ರತಿಭಟನೆ ಹಿಂಪಡೆದರು. ಗ್ರಾಪಂ ಸದಸ್ಯ ಬಾಬು ಪಾಟೀಲ, ಯಲ್ಲಪ್ಪ ನಾಯ್ಕರ, ಮಂಜು ಮರಾಠೆ, ಬಸು ಕೊಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net