

ಸಿಂಧನೂರು: ತಾಲೂಕಿನ ತಿಡಿಗೋಳ ಗ್ರಾಮದ ಆರಾಧ್ಯದೈವ ಶ್ರೀ ಆಂಜನೇಯ ದೇವರ ಜಾತ್ರೋತ್ಸವ ಅಂಗವಾಗಿ ಅ. 6 ರಂದು ಸಂಜೆ ರಥೋತ್ಸವ ನಡೆಯಲಿದೆ.
ಬೆಳಗ್ಗೆ ಶ್ರೀ ಆಂಜನೇಯ ದೇವರಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಎಲೆಪೂಜೆ, ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ಸಂಜೆ ಶ್ರೀ ಆಂಜನೇಯ ದೇವರ ರಥೋತ್ಸವ ನಡೆಯಲಿದೆ. ಕೊಪ್ಪಳ ಗವಿಮಠದ ಗವಿಸಿದ್ದೇಶ್ವರಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ನಿಡಶೇಷಿ ಚನ್ನಬಸವ ಶಿವಾಚಾರ್ಯಸ್ವಾಮೀಜಿ, ಚಿಕಲಪರ್ವಿ ಅಭಿನವ ರುದ್ರಮುನಿಸ್ವಾಮೀಜಿ, ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ರೌಡಕುಂದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಲ್ಲದಗುಡ್ಡ ಆರೂಢ ಅಯ್ಯಪ್ಪಸ್ವಾಮಿ ಭಾಗವಹಿಸುವರು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.