ಬಳ್ಳಾರಿ : ಸಂಡೂರು ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ನಿಂದ ಸಂಸದ ಈ. ತುಕಾರಾಮ್ ಪತ್ನಿ ಈ. ಅನ್ನಪೂರ್ಣ ಅವರಿಗೆ ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯಿದೆ.
ಉಪ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗರಿದೆರಿದೆ. ಈ ಬಾರಿ ಕಾಂಗ್ರೆಸ್ ನಿಂದ ತುಕಾರಾಮ್ ಕುಟುಂದವರಿಗೆ ಅಲ್ಲದೆ ಹೊಸಬರಿಗೆ ನೀಡಬೇಕು ಎಂಬು ಚರ್ಚೆ ಜೋರಾಗಿ ನಡೆದಿತ್ತು. ಆದರೆ, ಪಟ್ಟು ಬಿಡದ ತುಕಾರಾಮ್ ಪತ್ನಿ ಅನ್ನಪೂರ್ಣ ಅವರಿಗೆ ನೀಡಬೇಕು ಎಂದು ರಾಜ್ಯ ನಾಯಕರ ಬಳಿ ಒತ್ತಾಯ ಮಾಡಿದ್ದರು. ಅದರಂತೆ, ಕಾರ್ಮಿಕ ಸಚಿವ ಸಂತೋಷ ಲಾಡ್ ತುಕಾರಾಮ್ ಬೆನ್ನುಲುಬಾಗಿ ನಿಂತು ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಸದ್ಯ, ಟಿಕೆಟ್ ಘೋಷಣೆಯಾದ ಮೇಲೆ ಸ್ಥಳೀಯ ನಾಯಕರು ಕಾಂಗ್ರೆಸ್ ಯಾವ ರೀತಿಯಾಗಿ ಬೆಂಬಲವಾಗಿ ನಿಲ್ಲಬಲ್ಲರು ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಇತ್ತ ಬಿಜೆಪಿಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದು ಮಾಜಿ ಸಚಿವ ಜಿ. ಜನಾರ್ದನರೆಡ್ಡಿ, ಅಭ್ಯರ್ಥಿ ಬಂಗಾರು ಹನುಮಂತು ಪ್ರಚಾರ ನಡೆಸುತ್ತಿದ್ದಾರೆ. ಅವಳಿ ಜಿಲ್ಲೆಯ ನಾಯಕರಾದ ಆನಂದ ಸಿಂಗ್, ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ ಹಾಗೂ ಕೆ.ಘೋರ್ಪಡೆ ಮಾತ್ರ ಪ್ರಚಾರದಲ್ಲಿ ಕಾಣಿಸುತ್ತಿಲ್ಲ. ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಅಸಮಾಧಾನ ತೋರುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.