

railway station: ಯಾದಗಿರಿಯ ರೈಲು ನಿಲ್ದಾಣದಲ್ಲಿ ರೈಲ್ವೆ ಟಿಕೆಟ್ ಕ್ಲರ್ಕ್ ಓರ್ವ ಟಿಕೆಟ್ ಪಡೆಯಲು ಬಂದಂತಹ ಪ್ರಯಾಣಿಕರಿಗೆ ಟಿಕೇಟ್ ನೀಡದೆ ಫೋನ್ನಲ್ಲಿ ಮಾತನಾಡುತ್ತಾ ಕಾಲ ವ್ಯರ್ಥ ಮಾಡುತ್ತಿರುವಂತಹ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಟಿಕೆಟ್ ಕೌಂಟರ್ನತ್ತ ಜನರು ಟಿಕೆಟ್ ಪಡೆಯಲು ಬಹಳ ಸಮಯದಿಂದ ಕಾಯುತ್ತಿರುವುದನ್ನು ತೋರಿಸಲಾಗಿದೆ. ಆದರೆ, ಕ್ಲರ್ಕ್ ಕುರ್ಚಿಯ ಮೇಲೆ ಕೂತು ಸಂಬಂಧವಿಲ್ಲದಂತೆ ಫೋನ್ನಲ್ಲಿ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾನೆ. ಬಹಳ ಸಮಯದ ನಂತರ ಒಬ್ಬ ಪ್ರಯಾಣಿಕ ತಾಳ್ಮೆ ಕಳೆದುಕೊಂಡು, ಗುಮಾಸ್ತರ ಕಡೆಗೆ ಕೂಗಿದಾಗ ಆತ 1 ನಿಮಿಷ ಕಾಯಿರಿ ಎಂದು ಹೇಳಿದರು. ಕೋಪಗೊಂಡ ಪ್ರಯಾಣಿಕ ಇನ್ನೂ ಎಷ್ಟು ನಿಮಿಷ ಕಾಯಬೇಕು? ಕಳೆದ 15 ನಿಮಿಷಗಳಿಂದ 1 ನಿಮಿಷ ಎಂದು ಹೇಳುತ್ತಿದ್ದೀರಿ ಎಂದು ಕೋಪಗೊಂಡನು. ಈ ವೇಳೆ ಇತರ ಕೆಲವು ಪ್ರಯಾಣಿಕರು ಕೂಡ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಂತರ ಅವನು ತನ್ನ ಫೋನನ್ನು ಪಕ್ಕಕ್ಕೆ ಇರಿಸಿ, ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತಾನೆ.
ಈ ವಿಡಿಯೋವನ್ನು @rajanna_rupesh ಎಂಬ ಎಕ್ಸ್ ( X) ಬಳಕೆದಾರ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿ, "ಈ ದುರಹಂಕಾರಿ ವರ್ತನೆಯನ್ನು ನೋಡಿ.. ಕರ್ನಾಟಕದ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದ ಘಟನೆ. ಈ ವ್ಯಕ್ತಿಯನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ಧಾರೂಢ ಮಠದಲ್ಲಿ ಪ್ರವಚನ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ರೈಲ್ವೆ ಉದ್ಯೋಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದಕ್ಷಿಣ ಮಧ್ಯ ರೈಲ್ವೆ ಹಾಗೂ ರೈಲ್ವೆ ಸೇವಾದ ಎಕ್ಸ್ ಹ್ಯಾಂಡಲ್ ಎರಡೂ ಪ್ರತ್ಯೇಕವಾಗಿ ಪೋಸ್ಟ್ಗಳಿವೆ ಪ್ರತಿಕ್ರಿಯಿಸಿ, "ದಯವಿಟ್ಟು ಅಗತ್ಯ ಕ್ರಮಕ್ಕಾಗಿ @drmgtl ಗೆ ಸೂಚಿಸಲಾಗಿದೆ" ಎಂದು ತಿಳಿಸಿದೆ. ( ಏಜೆನ್ಸೀಸ್)