

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ಎಲ್ಲ ವಯೋಮಾನದವರಿಗೂ ಮತ್ತು ಹುಟ್ಟಿದ ಮಕ್ಕಳಿಗೂ ಬರಬಹುದಾದ ಸಾಮಾನ್ಯ ಸಮಸ್ಯೆ ಎಂದು ಪ್ರಾಧ್ಯಾಪಕ ಡಾ. ಕೆ.ಎಂ. ಉಸ್ಮಾನ್ ಯಾದವಾಡ ಹೇಳಿದರು.
ವಿಶ್ವ ಥೈರಾಯ್ಡ್ ದಿನ ನಿಮಿತ್ತ ನಗರದ ಎಸ್ಡಿಎಂ ವೈದ್ಯಕಿಯ ಕಾಲೇಜಿನ ವೈದ್ಯಕಿಯ ಚಿಕಿತ್ಸಾ ವಿಭಾಗ ಮತ್ತು ಅಂತಃಸ್ರವಿಕ ಗ್ರಂಥಿ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಥೈರಾಯ್ಡ್ ಸಮಸ್ಯೆಗಳ ಅರಿವು ಕುರಿತ ಒಂದು ದಿನದ ಶೈಣಿಕ ಕಾರ್ಯಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗಿ ನಿಯಂತ್ರಿಸಿ ನಿರ್ವಹಿಸದಿದ್ದರೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಥೈರಾಯ್ಡ್ ಸಮಸ್ಯೆ ಬಾರದಂತೆ ತಡೆಗಟ್ಟಲು ಸಾಧ್ಯವಿಲ್ಲ, ಜಾಗೃತಿ ಮತ್ತು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಆದರೆ, ಥೈರಾಯ್ಡ್ ಸಮಸ್ಯೆ ಸಾಂಕ್ರಾಮಿಕ ರೋಗವಲ್ಲ ಎಂದು ತಿಳಿಸಿದರು.
ಎಸ್ಡಿಎಂ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ. ನಿರಂಜನಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಹಿರಿಯ ವೈದ್ಯರಾದ ಡಾ. ಬಸವರಾಜ ಹಳಕಟ್ಟಿ, ಡಾ. ಪಿ.ವಿಠ್ಠಲರಾವ್, ಸಿಬ್ಬಂದಿ ಮತ್ತು ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.
ವಿದ್ಯಾಥಿರ್ಗಳಿಗೆ ಚರ್ಚೆ, ರಸಪ್ರಶ್ನೆ ನಡೆಸಲಾಯಿತು. ಡಾ. ಸ್ವಾಮಿ ಕಳಸೂರಮಠ ಸ್ವಾಗತಿಸಿದರು. ಡಾ. ರೈನಾ ವಂದಿಸಿದರು.