ಜ.6ರಂದು ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ: ಜ.5ರಂದು ರಾಜಬೀದಿಗಳಲ್ಲಿ ಉತ್ಸವ

Music
Published on

ಮಂಡ್ಯ: ಮಂಗಳವಾದ್ಯ ಕಲಾವಿದರ ಸಂಘ, ಜಿಲ್ಲಾ ಸವಿತಾ ಸಮಾಜ ಹಾಗೂ ತ್ಯಾಗರಾಜಸ್ವಾಮಿ ಆರಾಧನ ಬಳಗದ ಸಹಯೋಗದಲ್ಲಿ ಜ.6ರಂದು ನಗರದ ಗುತ್ತಲಿನ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ತ್ಯಾಗರಾಜಸ್ವಾಮಿ 6ನೇ ವರ್ಷದ ಆರಾಧನ ಮಹೋತ್ಸವ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 8.30ರಿಂದ 11.30ರವರೆಗೆ ನಾದಸ್ವರ ಕಛೇರಿ ಹಾಗೂ ಮಧ್ಯಾಹ್ನ 12ಗಂಟೆಗೆ ವಿಶೇಷ ನಾದಸ್ವರ ಕಚೇರಿ ನಡೆಯಲಿದೆ. ಅಂತೆಯೇ ಅನ್ನದಾಸೋಹ ಏರ್ಪಡಿಸಲಾಗಿದೆ. ಜ.5ರಂದು ಸಂಜೆ 6ಗಂಟೆಗೆ ಗುತ್ತಲು ರಾಜಬೀದಿಗಳಲ್ಲಿ ಅರ್ಕೇಶ್ವರಸ್ವಾಮಿ, ಬೋರೇದೇವರ ಬಸಪ್ಪನ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net