ತ್ಯಾಗರಾಜ ರತ್ನ ಪ್ರಶಸ್ತಿಗೆ ಪ್ರಹ್ಲಾದ ಗುಡಿ ಆಯ್ಕೆ

snd tyagraj
ಪ್ರಹ್ಲಾದ ಗುಡಿ
Published on

ಸಿಂಧನೂರು: ಬೆಂಗಳೂರಿನ ಮುಲಕನಾಡು ಮಹಾ ಸಂಘದಿಂದ ನಾದಬ್ರಹ್ಮ ತ್ಯಾಗರಾಜ ಅವರ 178ನೇ ಆರಾಧನಾ ಮಹೋತ್ಸವ-2025ರ ಅಂಗವಾಗಿ ಕೊಡ ಮಾಡುವ ತ್ಯಾಗರಾಜ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ತಾಲೂಕಿನ ಹಿರಿಯ ವಕೀಲ ಹಾಗೂ ಸಾಹಿತಿ ಪ್ರಹ್ಲಾದ ಗುಡಿ ಭಾಜನರಾಗಿದ್ದಾರೆ.

ಕಳೆದ 30 ವರ್ಷದಿಂದ ಪ್ರಹ್ಲಾದ ಗುಡಿ ಅವರು ವಕೀಲ, ಪತ್ರಕರ್ತ ಹಾಗೂ ಸಾಹಿತಿಗಳಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾ.16 ರಂದು ಬೆಂಗಳೂರಿನ ಬಸವನಗುಡಿಯ ಎನ್.ಆರ್.ಕಾಲನಿಯಲ್ಲಿರುವ ಎಪಿಎಸ್ ಕಾಮರ್ಸ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ಬಿ.ವಿ.ವಿಜಯಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net