ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ನೂತನ ಶಾಖೆ ಆರಂಭ

Co-operative bank
Published on

ಬೆಂಗಳೂರು: ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ತನ್ನ ವಜ್ರ ಮಹೋತ್ಸವದ ಶುಭ ಸಂದರ್ಭದಲ್ಲಿ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ನೂತನವಾಗಿ 13ನೇ ಶಾಖೆಯನ್ನು ಆರಂಭಿಸಿದೆ.

ಈ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಪೀಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಆರ್. ವೆಂಕಟೇಶ್, ಬಿಬಿಎಂಪಿ ಸದಸ್ಯರಾದ ಮುನಿರಾಜು, ಅಂಜನಾಮೂರ್ತಿ, ಯತೀಶ್, ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ಇತರರು ಹಾಜರಿದ್ದರು.

ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು, ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕಿನ ಈ ಹಿಂದಿನ ವಹಿವಾಟುಗಳನ್ನು ಗಮನಿಸಿದಾಗ ಬ್ಯಾಂಕು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಆಧುನಿಕ ತಂತ್ರಜ್ಞಾನವನ್ನು ಸಹಕಾರ ಬ್ಯಾಂಕುಗಳು ನೀಡುವಲ್ಲಿ ಸಲರಾದಲ್ಲಿ ಹೆಚ್ಚಿನ ಜನರು ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸಹಕಾರ ಕ್ಷೇತ್ರದ ಉನ್ನತಿಗೆ ಹೆಚ್ಚಿನ ನೆರವು ನೀಡಬೇಕೆಂದು ಹೇಳಿದರು.

ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಸಹಕಾರ ಕ್ಷೇತ್ರವು ಭಾರತದ ಆರ್ಥಿಕತೆಯ ಸದೃಢತೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಸಹಕಾರ ಬ್ಯಾಂಕು ಗಳು ವಿಶ್ವಾಸರ್ಯತೆಯನ್ನು ಉಳಿಸಿಕೊಂಡು ಉತ್ತಮ ಸೇವಾ ಮನೋಭಾವದಲ್ಲಿ ಕಾರ್ಯ ನಿರ್ವಹಿಸುವ ಅವಶ್ಯಕತೆ ಇದೆ. ಸಾಮಾನ್ಯವಾಗಿ ಹಿರಿಯ ನಾಗರೀಕರು, ಅನಕ್ಷರಸ್ತ ಗ್ರಾಮೀಣ ಭಾಗದ ಜನ ಸಹಕಾರ ಬ್ಯಾಂಕುಗಳ ಮೇಲೆ ಹೆಚ್ಚು ಅವಲಂಭಿತಾರಾಗಿರುತ್ತಾರೆ. ಜನಸಾಮಾನ್ಯರ ವಿಶ್ವಾಸವನ್ನು ಉಳಿಸಿಕೊಂಡು ಸ್ಥಳೀಯವಾಗಿ ಸಹಕಾರ ಬ್ಯಾಂಕುಗಳು ಬೆಳೆಯುವ ಅವಶ್ಯಕತೆಯಿದೆ ಎಂದರು. ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ತನ್ನ ದಿನ ನಿತ್ಯದ ಆಡಳಿತದಲ್ಲಿ ಪರದರ್ಶಕತೆ ಉಳಿಸಿಕೊಂಡು ಆರ್ಥಿಕ ಶಿಸ್ತುನ್ನು ಕಾಪಾಡಿಕೊಂಡಲ್ಲಿ ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಆರ್. ವೆಂಕಟೇಶ್, ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಎಲ್ಲಾ ಸವಲತ್ತುಗಳನ್ನು ನಮ್ಮ ಬ್ಯಾಂಕು ಗ್ರಾಹಕರಿಗೆ ನೀಡುತ್ತಿದ್ದು, ಪ್ರಸಕ್ತ ವರ್ಷದಲ್ಲೇ ಉಳಿಕೆ ನಾಲ್ಕು ಶಾಖೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯರ ಸಭಲಿಕರಣಕ್ಕೆ ಅನುಕೂಲವಾಗುವಂತೆ ಹಾಗೂ ಗುಡಿ ಕೈಗಾರಿಕೆಗಳನ್ನು ಉತ್ತೇಜಸುವಂತಹ ಅನೇಕ ಯೋಜನೆಗಳನ್ನು ರೂಪಿಸಿದ್ದು ಗ್ರಾಹಕರು ಹಾಗೂ ಸದಸ್ಯರು ಇವುಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net