ಗುರುವಾರ ಜಿಲ್ಲೆಯಲ್ಲಿ ಮತ್ತೆ 9 ಪಾಸಿಟಿವ್

corona
Published on

ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರ 9 ಕರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 444ಕ್ಕೆ ಏರಿಕೆಯಾಗಿದೆ. ಅಥಣಿ, ಬೆಳಗಾವಿ ತಾಲೂಕಿನ ವಂಟಮುರಿಯ ತಲಾ ಇಬ್ಬರು, ಪೀರನವಾಡಿ, ಶಿರಗುಪ್ಪಿ, ಐನಾಪುರ, ಹುಲಗಬಾಳಿ ಹಾಗೂ ಬೆಳಗಾವಿಯಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದ ವ್ಯಕ್ತಿಗೆ ಸೋಂಕು ದೃಢವಾಗಿದೆ.

ಮಹಾರಾಷ್ಟ್ರದಿಂದ ಆಗಮಿಸಿದ 45 ವರ್ಷದ ಪುರುಷ, ಧಾರವಾಡದಿಂದ ಬಂದ 35 ಪುರುಷನಿಗೆ ಸೋಂಕು ತಗುಲಿದೆ. ಉಳಿದ 7 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಈವರೆಗೆ ಒಟ್ಟು 342 ಜನ ಕರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net