

ಕೋಲಾರ: ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಯಾಯಿತು.
ಬೆಳಗ್ಗೆ 11 ಗಂಟೆ ತನಕ ಸಾಧಾರಣವಾಗಿದ್ದ ಬಿಸಿಲು ಇದ್ದಕ್ಕಿದ್ದಂತೆ ಮರೆಯಾಗಿ ತುಂತುರು ಮಳೆಯಾಯಿತು. ಕೆಲ ಪ್ರದೇಶದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದೆ. ಮುಂದಿನ ಮೂರು ದಿನಗಳವರೆಗೆ (ಏ.6) ಕರ್ನಾಟಕದ ದಕ್ಷಿಣ ಒಳನಾಡು ಕೋಲಾರ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನವು 3ರಿಂದ-4 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗಾಳಿಯ ಸಂಗಮ ಮತ್ತು ವಾಯುಭಾರ ಕುಸಿತ ಪ್ರಭಾವದಿಂದ, ಏ.4ರಿಂದ 6 ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿರಲಿದೆ. ದಣ ಕರ್ನಾಟಕ ಜಿಲ್ಲೆಗಳಲ್ಲಿ ಇನ್ನು ನಾಲ್ಕೆ$ದು ದಿನ ಮಳೆಯಾಗುವ ಸಾಧ್ಯಯಿದ್ದು, ಮೊದಲ ದಿನದ ಮಳೆಗೆ ಬೆಳೆಗಳು ಎಲ್ಲಿ ನಾಶವಾಗುತ್ತವೆ ಎಂಬ ಆತಂಕ ರೈತರಲ್ಲಿ ಎದುರಾಗಿದೆ.
ಸತತವಾಗಿ ಮೊಡಕವಿದ ವಾತಾವರಣ ಇದ್ದರೆ ಬೆಳೆಗಳಲ್ಲಿ ಬಿಟ್ಟಿರುವ ಹೂವು ಉದುರುವುದು, ಟೊಮ್ಯಾಟೊ, ಆಲೂಗಡ್ಡೆ ಬೆಳೆಗಳಲ್ಲಿ ಅಂಗಮಾರಿ ರೋಗ ಹರಡುವುದು, ನುಸಿ ರೋಗ ಸೇರಿ ವಿವಿಧ ರೋಗಗಳ ಹರಡಿ ಬೆಳೆ ಹಾನಿಯಾಗುವ ಸಾಧ್ಯತೆಯಿದೆ.
ಮಾವಿನ ಮರಗಳಲ್ಲಿ ಸಮೃದ್ಧಿವಾಗಿ ಹೂವು ಬಿಟ್ಟು ಕಾಯಿ ಕಚ್ಚುವ ಸಮಯ ಇದಾಗಿದೆ. ಕೆಲ ಮರಗಳಲ್ಲಿ ತಡವಾಗಿ ಹೂವು ಬಿಟ್ಟಿದ್ದು ಮೊಡಕವಿದ ಹಾಗೂ ತಂಪಾದ ವಾತಾವರಣಕ್ಕೆ ಉದುರುವುದುರಿಂದ ಉತ್ತಮ ಸಲಿನ ನಿರೀೆಯಲ್ಲಿ ರೈತರಲ್ಲಿ ನಿರಾಸೆ ಉಂಟು ಮಾಡಿದಂತಾಗುತ್ತದೆ.
ಬೆಳೆ ರಕ್ಷಣೆಯೇ ಸವಾಲು
ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ನಾಟಿ ಮಾಡುತ್ತಿದ್ದು, ಇನ್ನು ಕೆಲ ರೈತರ ಬೆಳೆಯು ಕೊಯ್ಲಿಗೆ ಬಂದಿದೆ. ಇದರ ಜತೆಗೆ ಕೋಟು, ಕ್ಯಾಪ್ಸಿಕಂ, ಪಪ್ಪಾಯ, ಬೀನ್ಸ್, ಬಜ್ಜಿ, ತೊಂಡೇಕಾಯಿ, ಕ್ಯಾರೇಟ್, ಮೂಲಂಗಿ ಬೆಳೆಗಳು ಕೊಯ್ಲಿಗೆ ಬಂದಿದ್ದು ತಂಪನೆಯ ವಾತಾವರಣಕ್ಕೆ ನಾಶವಾಗುವ ಆತಂಕ ರೈತರಲ್ಲಿ ಎದುರಾಗಿದೆ. ಬಹುತೇಕ ರೈತರು ಇಚೆಗೆ ಬೆಳೆಗಳನ್ನು ನಾಟಿ ಮಾಡಿದ್ದು ಈ ವಾತಾವರಣದಿಂದ ರಕ್ಷಣೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಳೆಗಳಲ್ಲಿ ತೇವಾಂಶ ಕಾಪಾಡಬೇಕು
ಬೆಳೆಗಳ ನಡುವೆ ಬೆಳೆ ಮಲ್ಚಿಂಗ್ ಮಾಡುವುದು. ಅರ್ಹ ಬೆಳೆಗಳಲ್ಲಿ ಅತ್ಯುತ್ತಮ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ರೈತರು ಟೊಮ್ಯಾಟೊ, ಬಾಳೆ ಮತ್ತು ದಾಳಿಂಬೆ ಬೆಳೆಗಳಿಗೆ ಬೆಂಬಲ ಒದಗಿಸಬೇಕು. ಹವಾಮಾನ ವೈಪರೀತ್ಯದಿಂದಾಗಿ, ರೈತರು ತರಕಾರಿ ಬೆಳೆಗಳಿಗೆ ನೀರುಣಿಸುವುದನ್ನು ಸ್ಥಗಿತಗೊಳಿಸಬೇಕು. ಮಳೆ ಬಾರದಿರುವ ಪ್ರದೇಶಗಳಲ್ಲಿ ಉತ್ತಮ ನೀರಿನ ಬಳಕೆಗಾಗಿ ಬೆಳಗಿನ ಸಮಯದಲ್ಲಿ ನೀರುಣಿಸಬೇಕು. ಪ್ರಚಲಿತ ಪರಿಸ್ಥಿತಿಯಲ್ಲಿ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಕೊಯ್ಲು ಮಾಡಿದ ಬೆಳೆಗಳ ಹೊಲದಲ್ಲಿ ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬಹುದು. ಇದು ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವನಂದ ಹನಗಲ್ ಸಲಹೆ ನೀಡಿದ್ದಾರೆ.
ಹವಮಾನ ವೈಪರೀತ್ಯದಿಂದ ಮಳೆ ಜೋರಾದರೆ ತೋಟಗಳಲ್ಲಿ ನೀರು ನಿಂತರೆ ಬೆಳೆಗಳಿಗೆ ಹಲವು ರೋಗಗಳು ಹರಡುತ್ತವೆ, ತೇವಾಂಶ ಸಮತೋಲನ ಮಾಡಿದರೆ ರಕ್ಷಣೆ ಮಾಡಬಹುದು. ಮಳೆ ಬಿಡುವು ನೀಡಿದ ಕೂಡಲೇ ತಜ್ಞರ ಶಿಾರಸು ಪಡೆದು ಔಷಧ ಸಿಂಪಡಣೆ ಮಾಡಬೇಕು.
> ಡಾ.ಶಿವಾನಂದ ಹಾನಗಲ್
ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ