ಸಿಡಿಲು ಬಡಿದು ಓರ್ವ ಸಾವು

Lightning
Published on

ಕಾರ್ಕಳ: ಇಲ್ಲಿನ ಈದು ನೂರಾಲ್‌ಬೆಟ್ಟು ಎಂಬಲ್ಲಿ ಸೋಮವಾರ ಸಾಯಂಕಾಲದ ಗಾಳಿ ಮಳೆ ಸಂದರ್ಭ ಸಿಡಿಲು ಬಡಿದು ಓರ್ವ ಮೃತಪಟ್ಟಿದ್ದಾರೆ.
ಜಿಗೀಶ್ ಜೈನ್ (45)ಮೃತಪಟ್ಟವರು. ಕೃಷಿ ಕೆಲಸ ಮಾಡುತ್ತಿದ್ದ ಅವರು ಸೋಮವಾರ ಮನೆಯಲ್ಲಿ ಒಬ್ಬರೇ ಇದ್ದರು. ನೀರು ತರಲೆಂದು ಹೊರಗೆ ಬಂದಾಗ ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕಿ ಉಳಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net