

ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಅನೇಕ ಪ್ರದೇಶದಲ್ಲಿ ಶುಕ್ರವಾರ ಗುಡು ಮಿಂಚಿನ ಓಟದಡಿ ಗಾಳಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯವಸ್ತಗೊಂಡಿತು.
ಕಳೆದ ೧೫ ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಸಿಗೆಯ ಬಿರುಬಿಸಿಲಿಗೆ ಬಸವಳಿದ ಜನಸಾಮಾನ್ಯರು ಅಕಾಲಿಕ ಮಳೆಯ ತಂಪಿನ ಅನುಭವದ ಸಿಹಿಯ ಜೊತೆಗೆ ಅನಾಹುತದ ಕಹಿಯನ್ನು ಸವಿದಿz್ದÁರೆ.
ಮಧ್ಯಾಹ್ನ ಇದ್ದಕ್ಕಿದ್ದಂತೆ ದಟ್ಟವಾಗಿ ಕವಿದ ಮೋಡದ ವಾತಾವರಣದಲ್ಲಿ ಭಾರಿ ಪ್ರಮಾಣದ ಗುಡುಗು, ಮಿಂಚಿನಿAದ ಕೂಡಿದ ಬಿರುಗಾಳಿ ಮಳೆ ಸುರಿದಿದ್ದು ಇದರ ಪರಿಣಾಮವಾಗಿ ವಿವಿಧ ಕಡೆ ಮರ-ಗಿಡಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮುಖ ್ಯರಸ್ತೆಗಳಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೀತ್ರ ಸಮಸ್ಯೆ ಉಂಟಾಯಿತು. ಭಾರಿ ಗಾಳಿ-ಮಳೆ ಆರಂಭವಾಗುತ್ತಿದ್ದAತೆಯೇ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಸುಮಾರು ಹೊತ್ತು ಕರೆಂಟಿಲ್ಲದೇ ಜನರು ಪರದಾಡಿದರು.